ಸಾರ್ವಜನಿಕ ವಿಷಯದ ಬಗ್ಗೆ ದೂರು ನೀಡಿದ ತನಗೆ ಪಂ.ಕಾರ್ಯದರ್ಶಿಯಿಂದ ಪೀಡನೆ: ಪಿಟಿಎ ಅಧ್ಯಕ್ಷೆ ಆರೋಪ
ಕುಂಬಳೆ: ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವುದು ಮಹಿಳೆಯರು ಸಹಿತವಿರುವ ಕಾಲ್ನಡೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸೂಚಿಸಿ ದೂರು ನೀಡಿರುವು ದಕ್ಕೆ ಕುಂಬಳೆ ಪಂಚಾಯತ್ ಕಾರ್ಯದರ್ಶಿ ದೈಹಿಕ ಹಾಗೂ ಮಾನಸಿಕವಾಗಿ ಪೀಡಿಸುತ್ತಿರುವುದಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮದರ್ ಪಿಟಿಎ ಅಧ್ಯಕ್ಷೆ ವಿನೀಷ ಬಾಲಕೃಷ್ಣನ್ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜುಲೈ ೮ರಂದು ಈ ವಿಷಯ ಸಂಬಂಧಿಸಿ ಕುಂಬಳೆ ಪಂಚಾಯತ್ ಕಾರ್ಯದರ್ಶಿಗೆ ತಾನು ದೂರು ನೀಡಿದ್ದೆ. ನೂರಾರು ಶಾಲಾ ವಿದ್ಯಾರ್ಥಿನಿಯರು ಸಂಚರಿ ಸುವ ದಾರಿಯಲ್ಲಿ ಹೆಣ್ಮಕ್ಕಳಿಗೆ ಕಹಿ ಅನುಭವ ಉಂಟಾಗುತ್ತಿದೆ. ಮಕ್ಕಳು ಹೆತ್ತವರೊಂದಿಗೆ ಹಾಗೂ ಅಧ್ಯಾಪ ಕರೊಂದಿಗೆ ದೂರು ನೀಡುತ್ತಿರುವುದು ಸಾಮಾನ್ಯವಾದ ಕಾರಣ ಈ ವಿಷಯದಲ್ಲಿ ನಾನು ಮಧ್ಯೆ ಪ್ರವೇಶಿಸಿದ್ದೇನೆ. ಇಕ್ಕಟ್ಟಾದ ಕಾಲ್ನಡೆ ದಾರಿಯಲ್ಲಿ ವ್ಯಾಪಾರವನ್ನು ಹೊರತು ಪಡಿಸಬೇಕೆಂದು ವಿನೀಷ ಪಂಚಾಯತ್ ಕಾರ್ಯದರ್ಶಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದರು. ಲಿಖಿತವಾಗಿ ದೂರು ನೀಡಿದರೂ ಯಾವುದೇ ಕ್ರಮ ಉಂ ಟಾಗದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಿ ಸಲು ತೆರಳಿದಾಗ ‘ನೀವು ನನ್ನನ್ನು ಸುಮ್ಮನೆ ಬಿಡಬೇಕು, ತನ್ನನ್ನು ಸಂರಕ್ಷಿಸಬೇಕೆಂದು, ಅಧ್ಯಕ್ಷೆ, ಜೆಎಸ್‌ನೊಂದಿಗೆ ಗೂಢಾಲೋಚನೆ ನಡೆಸಿಯಲ್ಲವೇ ನೀವು ದೂರು ಸಹಿತ ತಲುಪಿರುವುದು’ ಎಂದು ಕಾರ್ಯದರ್ಶಿ ಪ್ರಶ್ನಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕುಂಬಳೆಯಲ್ಲಿ ಸಾಮಾಜಿಕ, ಮಾನವಹಕ್ಕು ಚಟುವಟಿಕೆಗಳಲ್ಲಿ ಮಧ್ಯೆ ಪ್ರವೇಶಿಸುವ ವ್ಯಕ್ತಿಯಾಗಿದ್ದೇನೆ ತಾನೆಂದು ತಿಳಿಸಿದ ವಿನೀಷ ಹಲ ವಾರು ಸಾರ್ವಜನಿಕ ವಿಷಯಗಳಲ್ಲಿ ದೂರು ನೀಡಿರುವುದಾಗಿಯೂ ತಿಳಿಸಿ ದ್ದಾರೆ. ಓರ್ವ ಸರಕಾರಿ ಅಧಿಕಾರಿ ಯಿಂದ ಈ ರೀತಿಯ ದುರವಸ್ಥೆ ಇದೇ ಪ್ರಥಮವಾಗಿದೆ. ಈ ವಿಷಯ ಕುಂಬಳೆ ಪೊಲೀಸ್ ಠಾಣೆಗೆ ತಲುಪಿದಾಗ ಅಲ್ಲಿನ ಓರ್ವ ಪೊಲೀಸ್ ಅಧಿಕಾರಿ ತನ್ನನ್ನು ರಿಮಾಂಡ್ ಗೊಳಿಸುವುದಾಗಿ ಬೆದರಿಸಿ ಅವಮಾನಿಸಿರುವುದಾಗಿಯೂ ಇವರು ದೂರಿದ್ದಾರೆ. ಆ ಬಳಿಕ ಇದೇ ಪೊಲೀಸ್ ಅಧಿಕಾರಿ ಸಮಸ್ಯೆಯನ್ನು ಮಾತುಕತೆ ಮೂಲಕ ಮುಗಿಸಲು ಯತ್ನಿಸಿರುವುದಾಗಿಯೂ ಇವರು ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮ ಆಗ್ರಹಿಸಿ ಮಹಿಳಾ ಆಯೋಗ, ಮಾನವ ಹಕ್ಕು ಆಯೋಗ, ಜಿಲ್ಲಾ ಅಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ ಎಂಬಿವರಿಗೆ ದೂರು ನೀಡಿರುವುದಾಗಿ ಇವರು ತಿಳಿಸಿದ್ದಾರೆ. ತನಗೆ ನ್ಯಾಯ ಲಭಿ ಸಬೇಕೆಂದು ಇದಕ್ಕಾಗಿ ಯಾವುದೇ ರೀತಿಯಲ್ಲಿ ಕಾನೂನು ಹೋರಾಟಕ್ಕೆ ತಾನು ಸಿದ್ಧವೆಂದು ವಿನೀಷ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.