ಸೈಬರ್ ವಂಚನೆ: ಕಲ್ಲಿಕೋಟೆ ನಿವಾಸಿ ಸೆರೆ
ಮಂಗಳೂರು: ಶೇರು ಮಾರು ಕಟ್ಟೆಯಲ್ಲಿ ಹಣ ತೊಡಗಿಸಿದರೆ ಭಾರೀ ಲಾಭ ಮಾಡಿಕೊಡುವುದಾಗಿ ವಾಟ್ಸಪ್ ಮೆಸೇಜ್ ಮಾಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಕೇರಳೀಯನನ್ನು ಬಂಧಿಸಲಾಗಿದೆ. ಮಂಗಳೂರಿನ ವ್ಯಕ್ತಿಯೊಬ್ಬರಿಂದ ಇತ್ತೀಚೆಗೆ 40 ಲಕ್ಷ ರೂ. ನಕಲಿ ಶೇರು ಹೆಸರಲ್ಲಿ ಈತ ಪಡೆದಿದ್ದು, ಪೊಲೀಸರು ಬ್ಯಾಂಕ್ ಖಾತೆಯ ಬೆನ್ನಟ್ಟಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಲ್ಲಿಕೋಟೆಯ ಜಯಂತ್ ಪಿ. (35)ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಈತನ ಖಾತೆಯನ್ನು ದೇಶದಾದ್ಯಂತ ಹಲವಾರು ಸೈಬರ್ ವಂಚಕರು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. 90 ಕಡೆಗಳಲ್ಲಿ ದೂರು ದಾಖಲಾಗಿದೆ. ಸೈಬರ್ ವಂಚಕರು ನೆಟ್‌ವರ್ಕ್ ಮೂಲಕ ಹಲವರನ್ನು ಸಂಪರ್ಕಿಸಿ ಬ್ಯಾಂಕ್ ಖಾತೆ ಮೂಲಕ ಹಣ ಪಡೆಯುತ್ತಿದ್ದು, ಅವರಿಗೆ ಕಮಿಶನ್ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಿಶನ್ ಆಸೆಗೆ ಇಂತಹ ಅಕ್ರಮ ಕೆಲಸಗಳಿಗೆ ಕೆಲವರು ಸಹಾಯ ಮಾಡುತ್ತಿದ್ದು, ಬಳಿಕ ಕೇಸು ಎದುರಿಸಬೇಕಾಗುತ್ತದೆ.