ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 1.152 ಕಿಲೋ ಗಾಂಜಾ ವಶ: ಇಬ್ಬರ ಸೆರೆ
ಕಾಸರಗೋಡು: ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 1.152 ಕಿಲೋ ಗಾಂಜಾ ವನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ವಶಪಡಿ ಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಹೊಸದುರ್ಗ ಅಜಾನೂರು ಪುದಿಯಕಂಡ ನಿವಾಸಿ ವಿ. ಪ್ರವೀಣ್ (39) ಮತ್ತು ಅಜಾನೂರು ಕಾಟುಕುಳಂಗರ ಕಂಡತ್ತಿಲ್ ಹೌಸ್ನ ಕೆ.ಎ. ಶ್ರೀಜಿತ್ (26) ಎಂಬಿವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಚಟ್ಟಂಚಾಲ್ ನೋರ್ತ್ ರಾಷ್ಟ್ರೀ ಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ ವೇಳೆ ಆ ದಾರಿಯಾಗಿ ಆರೋಪಿಗಳು ಬಂದ ಸ್ಕೂಟರ್ ತಡೆದು ನಿಲ್ಲಿಸಿ ಅದನ್ನು ತಪಾಸಣೆಗೊಳಿಸಿದಾಗ ಸ್ಕೂಟರಿನ ಸೀಟಿನ ಅಡಿಭಾಗದಲ್ಲಿ ಕವರ್ನೊಳಗೆ ಬಚ್ಚಿಟ್ಟ ಸ್ಥಿತಿಯಲ್ಲಿ ಗಾಂಜಾ ಪತ್ತೆ ಯಾಗಿದೆ. ತಕ್ಷಣ ಆ ಮಾಲು ಸಹಿತ ಸ್ಕೂಟರನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಜೋಸ್ ವಿನ್ಸೆಂಟ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ರಾಮಚಂದ್ರನ್ ನಾಯರ್, ಸುಭಾಷ್, ರಾಜೇಶ್ ಎಂಬವರು ಒಳಗೊಂಡಿದ್ದರು.