ಸ್ವಾಮೀಜಿಯವರ ನೇತೃತ್ವದಲ್ಲಿ ಧರ್ಮಸಂದೇಶ ಯಾತ್ರೆ: ಸ್ವಾಗತಸಮಿತಿ ರೂಪೀಕರಣ ನಾಳೆ
ಕಾಸರಗೋಡು: ಸನಾತನ ಧರ್ಮದ ಮೌಲ್ಯ ಎತ್ತಿ ಹಿಡಿಯಲು, ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ತೊಡೆದುಹಾಕಲು ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಧರ್ಮಸಂದೇಶ ಯಾತ್ರೆ ಇದರ ಜಿಲ್ಲಾ ಸ್ವಾಗತ ಸಮಿತಿ ರೂಪೀಕರಣ ಸಭೆ ನಾಳೆ ಬೆಳಿಗ್ಗೆ ೯.೩೦ಕ್ಕೆ ವಿದ್ಯಾನಗರ ಚಿನ್ಮಯ ವಿದ್ಯಾಲಯದ ಸಿಬಿಸಿ ಸಭಾಂಗಣದಲ್ಲಿ ನಡೆಯಲಿದೆ.
ಕೇರಳದ ವಿವಿಧ ಆಶ್ರಮಗಳ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಧರ್ಮಸಂದೇಶ ಯಾತ್ರೆ ಇಂದಿನಿಂದ ೨೧ರವರೆಗೆ ಕಾಸರಗೋಡಿ ನಿಂದ ತಿರುವನಂತಪುರವರೆಗೆ ನಡೆ ಯಲಿದೆ. ರಾಜ್ಯ ಮಟ್ಟದ ಸಮಿತಿಯಲ್ಲಿ ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಮುಖ್ಯ ಗೌರವಾಧ್ಯಕ್ಷೆಯಾಗಿ ಹಾಗೂ ಬರಹಗಾರ ಸಿ. ರಾಧಾಕೃಷ್ಣನ್ ಅಧ್ಯಕ್ಷರಾಗಿರುವ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಸ್ವಾಗತಸಮಿತಿ ಸಭೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.