ಹಿರಿಯ ಕೃಷಿಕ ಮೂಡಂಬಿಕಾನ ಗೋಪಾಲಕೃಷ್ಣ ಭಟ್ ನಿಧನ
ಪೈವಳಿಕೆ: ಹಿರಿಯ ಕೃಷಿಕ, ಸಿಪಿಎಂ ಬೆಂಬಲಿಗನಾಗಿದ್ದ ಗೋಪಾ ಲಕೃಷ್ಣ ಭಟ್ ಮೂಡಂಬಿಕಾನ (74) ನಿಧನಹೊಂದಿದರು. ಉತ್ತಮ ಕೃಷಿಕರಾಗಿದ್ದರು. ಮೃತರು ಪತ್ನಿ ಮಧುರ, ಮಕ್ಕಳಾದ ದೀಪ್ತಿ, ಪ್ರದೀಪ್ ಕುಮಾರ್, ಸೊಸೆ ಶ್ರಿಪ್ರದ, ಅಳಿಯ ಮಹೇಶ, ಸಹೋದರ-ಸಹೋದರಿ ಯರಾದ ಶ್ರೀನಿವಾಸ ರಾವ್ (ಸಿಪಿಎಂ ಕಾಯರ್ಕಟ್ಟೆ ಬ್ರಾಂಚ್ ಮಾಜಿ ಕಾರ್ಯದರ್ಶಿ), ಪ್ರಭಾಕರ ರಾವ್, ಶಂಕರಿ ಅಮ್ಮ, ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ, ಸುಂದರ ಬೀಡುಬೈಲು, ಖಲೀಲ್ ಚಿಪ್ಪಾರು, ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ, ಸದಸ್ಯೆ ರಹಮತ್ ರಹಮಾನ್, ಸಿಪಿಎಂ ಕಾಯರ್ಕಟ್ಟೆ ಬ್ರಾಂಚ್ ಕಾರ್ಯ ದರ್ಶಿ ಜೈನಬ ಬಾನು ಮೊದಲಾ ದವರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಕಾಯರ್ಕಟ್ಟೆ ಮಾನಿಪ್ಪಾಡಿ ಬ್ರಾಂಚ್ ಸಮಿತಿಗಳು, ಕರ್ಷಕ ಸಂಘ, ಸಿಐಟಿಯು, ಡಿವೈಎಫ್ಐ ಪಂಚಾ ಯತ್ ಸಮಿತಿ, ಭಗತ್ ಸಿಂಗ್ ಯುವ ಕಲಾ ವೇದಿ ಮಾನಿಪ್ಪಾಡಿ ಸಂತಾಪ ಸೂಚಿಸಿದೆ.