ಹೃದಯಾಘಾತ: ಟೈಲರ್ ನಿಧನ
ಮಂಜೇಶ್ವರ: ಪೊಸೋಟು ಬಳಿಯ ಚಾದಿಪಡ್ಪು ನಿವಾಸಿ ಹಿರಿಯ ಟೈಲರ್ ನಾರಾಯಣ (70) ನಿಧನರಾದರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದÄ, ನಿನ್ನೆ ಬೆಳಿಗ್ಗೆ ಎದ್ದೇಳಲಿಲ್ಲ. ಮನೆಯವರು ನೋಡಿದಾಗ ನಿಧನಹೊಂದಿದ್ದರು. ಹೊಸಂಗಡಿ ಪೇಟೆಯಲ್ಲಿ ಹಾಗೂ ಮನೆ ಸಮೀಪದಲ್ಲಿ ಟೈಲರಿಂಗ್ ನಡೆಸುತ್ತಿದ್ದರು. ಮೃತರು ಪತ್ನಿ ಭಾರತಿ, ಸಹೋದರಿಯರಾದ ಕಲ್ಯಾಣಿ, ಯಶೋದ, ಭವಾನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.