ಹೃದಯಾಘಾತ: ವಿಮೆಕಂಪೆನಿ ಉದ್ಯೋಗಿ ನಿಧನ
ಕಾಸರಗೋಡು: ಹೃದಯಾಘಾತದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನೇಶನಲ್ ಇನ್ಶೂರೆನ್ಸ್ ಕಂಪೆನಿ ಉದ್ಯೋಗಿ ಮೃತಪಟ್ಟರು. ಕೋಟಪ್ಪಾರದ ಬಿ. ನಾರಾಯಣನ್ (59) ಮೃತಪಟ್ಟವರು. ಕಾಸರಗೋಡು ಕಚೇರಿಯ ಸೀನಿಯರ್ ಅಸಿಸ್ಟೆಂಟ್ ಆಗಿದ್ದರು. ಬುಧವಾರ ಹೃದಯಾಘಾತವುಂಟಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ.
ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಉಲ್ಲಾಸ್, ಸ್ನೇಹ, ಸೊಸೆ ಶರಣ್ಯ, ಅಳಿಯ ಶ್ರೀನಾಥ್, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.