ಹೇಳಿಕೆಗಷ್ಟೇ ಸೀಮಿತವಾದ ಪೈವಳಿಕೆ ಪೊಲೀಸ್ ಠಾಣೆ
ಪೈವಳಿಕೆ: ಅಪರಾಧ ಕೃತ್ಯಗಳು ಹೆಚ್ಚಾಗಿರುವ ಜಿಲ್ಲೆಯ ಉತ್ತರವಲಯದಲ್ಲಿ ಪೈವಳಿಕೆಯನ್ನು ಕೇಂದ್ರವನ್ನಾಗಿ ಮಾಡಿ ಆರಂಭಿಸಲಾಗುವುದೆಂದು ಘೋಷಿಸಿದ ಪೊಲೀಸ್ ಠಾಣೆ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಕೊಲೆ ಸಹಿತವಿರುವ ಅಪರಾಧಗಳು ಹೆಚ್ಚುತ್ತಿರುವಾಗಲೂ ಕೆಲಸದ ಒತ್ತಡದಿಂದ ಉಸಿರುಗಟ್ಟುವ ಸ್ಥಿತಿ ಪೊಲೀಸ್ ಅಧಿಕಾರಿಗಳಲ್ಲಿದೆ. ಕೆಲಸದ ಒತ್ತಡ ಹೆಚ್ಚಿರುವ ಮಂಜೇಶ್ವರ, ಕುಂಬಳೆ ಪೊಲೀಸ್ ಠಾಣೆಗಳನ್ನು ವಿಭಜಿಸಿ ಪೈವಳಿಕೆಯಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕೆಂಬ ಘೋಷಣೆ ನಡೆದು ದಿನಗಳು ಹಲವು ಕಳೆದರೂ ಮುಂದಿನ ಕ್ರಮ ಕಡತಕ್ಕೆ ಮಾತ್ರ ಸೀಮಿತವಾಗಿದೆ. ಸ್ಥಳ ಪತ್ತೆಹಚ್ಚಿ ಮೂರು ವರ್ಷ ಕಳೆದರೂ ಮುಂದಿನ ಕ್ರಮ ಉಂಟಾಗಿಲ್ಲ. ಪಂಚಾಯತ್‌ನ ಬಾಯಿಕಟ್ಟೆಯಲ್ಲಿ ಪೊಲೀಸ್ ಠಾಣೆಗಾಗಿ ಸ್ಥಳ ಪತ್ತೆಮಾಡಲಾಗಿತ್ತು. ಸರಕಾರದ ಸ್ವಾಧೀನವಿರುವ 30 ಸೆಂಟ್ಸ್ ಸ್ಥಳದಲ್ಲಿ ನೂತನ ಪೊಲೀಸ್ ಠಾಣೆ ನಿರ್ಮಿಸಲು ತೀರ್ಮಾನಿಸ ಲಾಗಿತ್ತು. ಇದರ ಜೊತೆಯಲ್ಲೇ ತೀರ್ಮಾನ ಕೈಗೊಂಡ ಮೇಲ್ಪರಂಬ ಠಾಣೆ ಚಟುವಟಿಕೆ ಆರಂಭಿಸಿ ವರ್ಷಗಳು ಕಳೆಯಿತು.
ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಅಧಿ ಕಾರಿಗಳ ಕೊರತೆ ಹಾಗೂ ಚಟುವಟಿಕಾ ವ್ಯಾಪ್ತಿಯ ವಿಸ್ತಾರ ಮತ್ತು ಕ್ರಿಮಿನಲ್, ಗೂಂಡಾ ತಂಡಗಳ ಬಾಹುಳ್ಯವಿರುವ ಕಾರಣ ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹೆಚ್ಚಿದೆ. ಈ ಠಾಣೆ ವ್ಯಾಪ್ತಿಯಲ್ಲಾಗಿದೆ ಪೈವಳಿಕೆ ಸಹಿತದ ಪಂಚಾಯತ್‌ಗಳು. ಮಂಜೇಶ್ವರ ಪೊಲೀಸ್ ಠಾಣೆಯಂತೆ ವಿಸ್ತಾರವಿರುವ ಪೊಲೀಸ್ ಠಾಣೆಗಳು ರಾಜ್ಯದಲ್ಲೇ ಅತೀ ವಿರಳವಾಗಿದೆ. ಸಾಮಾನ್ಯ ವಾಗಿ ಒಂದು ಅಥವಾ ಎರಡು ಪಂಚಾಯತ್‌ಗಳನ್ನು ಕೇಂದ್ರೀಕರಿಸಿ ಒಂದು ಪೊಲೀಸ್ ಠಾಣೆ ವ್ಯಾಪ್ತಿ ಇದ್ದರೆ ಐದು ಪಂಚಾಯತ್‌ಗಳು, ೨೭ ವಿಲ್ಲೇಜ್‌ಗಳು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇರಿದೆ.
ಉತ್ತರ ಭಾಗದಲ್ಲಿ ಕರ್ನಾಟಕಕ್ಕೆ ತಾಗಿಕೊಂಡಿ ರುವ 15 ರಸ್ತೆಗಳಿವೆ. ಇದ್ಯಾವುದರಲ್ಲೂ ಭದ್ರತಾ ವ್ಯವಸ್ಥೆ ಇಲ್ಲ. ಎರಡು ರೈಲ್ವೇ ಕ್ರಾಸ್‌ಗಳ ಮಧ್ಯೆ ನೆಲೆಗೊಂಡಿರುವ ಠಾಣೆಯಾಗಿದೆ ಮಂಜೇಶ್ವರ. ಅಪರಾಧ ಕೃತ್ಯಗಳು ನಡೆದರೆ ಠಾಣೆಯಿಂದ ಪೊಲೀಸರು ಘಟನಾ ಸ್ಥಳಕ್ಕೆ ತಲುಪುವಾಗ ಆರೋಪಿಗಳು ಗಡಿಪಾರಾಗಿರು ತ್ತಾರೆ. ಕಳವು, ಕೊಲೆ, ಅಪಹರಣ, ಮಾದಕ ಪದಾರ್ಥ ಸಾಗಾಟ ಮೊದಲಾದ ಗಡಿ ಪ್ರದೇಶಗಳನ್ನು ಕೇಂದ್ರೀಕರಿಸಿ ಹಲವಾರು ಪ್ರಕರಣಗಳು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಿನಂಪ್ರತಿ ನೋಂದಾಯಿಸ ಲಾಗುತ್ತಿದೆ. ಈ ಮಧ್ಯೆ ಉತ್ಸವಗಳಿಗೂ, ವಿವಿಧ ಆಚರಣೆಗಳಿಗೂ ಕಾವಲುಗಾರರಾಗಿಯೂ ಪೊಲೀಸರು ಉಪಸ್ಥಿತರಿರಬೇಕಾಗುತ್ತಿದೆ. ಸರಾಸರಿ ವಾರವೊಂ ದರಲ್ಲಿ ನೂರರಷ್ಟು ಪ್ರಕರಣಗಳು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದೆ.