೩೭ ಬಾರಿ ಮುಂದೂಡಲ್ಪಟ್ಟ ಲಾವ್ಲಿನ್ ಹಗರಣದ ವಾದ ಇಂದು ಸುಪ್ರೀಂಕೋರ್ಟ್ನ ಪರಿಗಣನೆಗೆ
ಕೊಚ್ಚಿ: ಸತತವಾಗಿ ೩೭ನೇ ಬಾರಿ ಮುಂದೂಡಲ್ಪಟ್ಟಿದ್ದ, ಕೇರಳದಲ್ಲಿ ಬಾರೀ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಎಸ್ಎನ್ಸಿ ಲಾವ್ಲಿನ್ ಹಗರಣದ ಕುರಿತಾದ ವಾದ ೩೮ನೇ ಬಾರಿ ಎಂಬಂತೆ ಇಂದು ಮತ್ತೆ ಸುಪ್ರೀಂಕೋರ್ಟ್ ಪರಿಶೀಲಿಸಲಿದೆ.
ಕೊನೆಯದಾಗಿ ಕಳೆದ ಅಕ್ಟೋ ಬರ್ ೩೧ರಂದು ಈ ಹಗರಣದ ವಾದ ಸುಪ್ರೀಂಕೋರ್ಟ್ನ ಪರಿಗಣನೆಗೆ ಬಂದಿದ್ದರೂ, ಬಳಿಕ ಕಾರಣಾಂತರದಿಂದಾಗಿ ವಾದ ಆಲಿಸುವಿಕೆಯನ್ನು ನ್ಯಾಯಾಲಯ ಮತ್ತೆ ಇಂದಿಗೆ ಮುಂದೂಡಿತ್ತು.
ಎಸ್ಎನ್ಸಿ ಲಾವ್ಲಿನ್ ಹಗರಣ ದಲ್ಲಿ ಆರೋಪಿಗಳನ್ನಾಗಿ ಹೆಸರಿ ಸಲಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿ ಇತರ ಕೆಲವರನ್ನು ಆರೋಪದಿಂದ ವಿಚಾರಣಾ ನ್ಯಾಯಾಲಯ ಈ ಹಿಂದೆ ದೋಷಮುಕ್ತ ಗೊಳಿಸಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
ಆ ತೀರ್ಪನ್ನು ನಂತರ ೨೦೧೭ ಅಕ್ಟೋಬರ್ನಲ್ಲಿ ಸಿಬಿಐಯ ಕೊಚ್ಚಿ ನ್ಯಾಯಾಲಯವು ಎತ್ತಿ ಹಿಡಿದು ಅದಕ್ಕೆ ಅಸ್ತು ನೀಡಿತ್ತು. ಅದನ್ನು ಪ್ರಶ್ನಿಸಿ ಪ್ರಸ್ತುತ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಬಳಿಕ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಮಾತ್ರವಲ್ಲ, ಈ ಹಗರಣದಲ್ಲಿ ಆರೋಪಿಗಳಾಗಿದ್ದು, ಖುಲಾಸೆಗೊಳಿ ಸಲ್ಪಡದೇ ಇರುವ ಇತರ ಅಧಿಕಾರಿ ಗಳೂ ಇನ್ನೊಂದೆಡೆ ಸುಪ್ರೀಂಕೋ ರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅದು ಕೂಡಾ ಈಗ ಸುಪ್ರೀಂ ಕೋರ್ಟ್ನ ಪರಿಗಣನೆಯಲ್ಲಿದೆ.