ಅಂಗಡಿಗೆ ತೆರಳುತ್ತಿದ್ದ ಬಾಲಕನಿಗೆ ಕಿರುಕುಳ: ಯುವಕ ಪೋಕ್ಸೋ ಪ್ರಕಾರ ಸೆರೆ
ಬದಿಯಡ್ಕ: ಅಂಗಡಿಗೆ ನಡೆದು ಹೋಗುತ್ತಿದ್ದ ಬಾಲಕನಿಗೆ ಕಿರುಕುಳ ನೀಡಿದ ಬಗ್ಗೆ ದೂರುಂಟಾಗಿದೆ. 13ರ ಹರೆಯದ ಬಾಲಕ ನೀಡಿದ ದೂರಿ ನಂತೆ ಯುವಕನನ್ನು ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಕುಂಬ್ಡಾಜೆ ನೀರಡ್ಕದ ಅಶ್ವಿತ್ ಕಿರಣ್ (27) ಬಂಧಿತ ವ್ಯಕ್ತಿಯಾಗಿದ್ದಾನೆ. ಬಾಲಕ ಇತ್ತೀಚೆಗೆ ಅಂಗಡಿಗೆ ನಡೆದುಹೋಗುತ್ತಿದ್ದಾಗ ಯುವಕ ಕಿರುಕುಳ ನೀಡಿದ್ದಾನೆನ್ನ ಲಾಗಿದೆ. ಈ ವೇಳೆ ಓಡಿ ಪರಾರಿ ಯಾದ ಬಾಲಕ ಮನೆಯವರಲ್ಲಿ ವಿಷಯ ತಿಳಿಸಿದ್ದನು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.