ಅಂಗಡಿಗೆ ನುಗ್ಗಿ ದಾಂಧಲೆ ಓರ್ವನ ವಿರುದ್ಧ ಕೇಸು
ಕುಂಬಳೆ: ತೆಂಗಿನಕಾಯಿ ಖರೀದಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದಂತೆ ಕಟ್ಟತ್ತಡ್ಕದ ಗಣೇಶನ್ ಎಂಬಾತನ ವಿರುದ್ಧ ಕುಂಬಳ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಟ್ಟತ್ತಡ್ಕದಲ್ಲಿರುವ ತೆಂಗಿನಕಾಯಿ ಖರೀದಿ ಅಂಗಡಿಗೆ ನಿನ್ನೆ ಬೆಳಿಗ್ಗೆ ಅತಿಕ್ರಮಿಸಿ ನುಗ್ಗಿದ ಗಣೇಶನ್ ಅಲ್ಲಿನ ಗಾಜು ಪುಡಿಗೈದು ನಾಶನಷ್ಟ ಸೃಷ್ಟಿಸಿರುವುದಾಗಿ ದರಲಾಗಿದೆ. ಈ ಬಗ್ಗೆ ಅಂಗಡಿಯ ಮಾಲಕ ಕನ್ಯಪ್ಪಾಡಿಯ ಅಬ್ದುಲ್ಲ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.