ಅಂಗಡಿಮೊಗರು ಸರಕಾರಿ ಶಾಲೆಯಲ್ಲಿ ಇಂಟರ್‌ಲಾಕ್ ಅಳವಡಿಕೆ
ಪುತ್ತಿಗೆ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಮಂಜೂರಾದ ಇಂಟರ್‌ಲಾಕ್‌ನ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಬೇಸಿಗೆ ಕಾಲದಲ್ಲಿ ತೀವ್ರವಾದ ಧೂಳಿನ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಶಾಲಾ ಮೈದಾನದಲ್ಲಿ ಕಟ್ಟಿನಿಲ್ಲುವ ನೀರು ಇದರಿಂದ ಮಕ್ಕಳಿಗೆ ತರಗತಿಗೆ ಬರಲು ಸಂಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ನಿಧಿಯಿಂದ ಮೊತ್ತ ಮಂಜೂರು ಮಾಡಿ ಇಂಟರ್‌ಲಾಕ್ ಹಾಕಲಾಗಿದೆ. ಈ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷೆ ಎಂ. ಜಯಂತಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯ ಅಸೀಫಲಿ ಕಂದಲ್, ಪಿಟಿಎ ಅಧ್ಯಕ್ಷ ಪಿ.ಬಿ. ಮೊಹಮ್ಮದ್, ಪ್ರಾಂಶುಪಾಲೆ ರಾಜಲಕ್ಷ್ಮಿ, ಮುಖ್ಯೋಪಾಧ್ಯಾಯಿನಿ ಕುಮಾರಿ ವತ್ಸಲ, ಶಿವಪ್ಪ ರೈ, ಅಬ್ದುಲ್ಲ, ಬಶೀರ್, ವಿಠಲ ರೈ, ಪಿ.ಎಂ. ಮಾಧವನ್, ಆಮೀನ, ಬಿ.ಎಂ. ಸೈದ್, ಎನ್. ಸಲಾವುದ್ದೀನ್ ಭಾಗವಹಿಸಿದರು.