ಅಂಗನವಾಡಿ ಸಿಬ್ಬಂದಿಗಳು ಬಿಎಂಎಸ್ಗೆ ಸೇರ್ಪಡೆ: ಅಭಿನಂದನೆ
ಉಪ್ಪಳ: ಮಂಗಲ್ಪಾಡಿ ಪಂಚಾಯ ತ್ನಲ್ಲಿ ವಿವಿಧ ಸಂಘಟನೆಯಲ್ಲಿದ್ದ ಸುಮಾರು 30 ಅಂಗನವಾಡಿ ವರ್ಕ ರ್ಸ್ ಹಾಗೂ ಹೆಲ್ಪರ್ಸ್ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್ಗೆ) ಸೇರ್ಪಡೆ ಗೊಂಡಿದ್ದಾರೆ. ಕೈಕಂಬದ ಪಂಚಮಿ ಹಾಲ್ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ. ವಿ. ಬಾಬು ಮಾವುಂಗಾಲ್ ಕಾರ್ಯಕರ್ತೆಯರನ್ನು ಶಾಲು ಹೊದಿಸಿ ಸಂಘಟನೆಗೆ ಬರ ಮಾಡಿಕೊಂಡರು. ಈ ವೇಳೆ ಅಂಗನವಾಡಿ ವರ್ಕರ್ಸ್ ಸಂಘದ ರಾಜ್ಯ ಅಧ್ಯಕ್ಷೆ ಸಿಂಧೂ ಮನೋರಾಜ್. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಅಂಗನವಾಡಿ ವರ್ಕರ್ಸ್ & ಹೆಲ್ಪರ್ಸ್ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶೋಭಾ ನಾಯ್ಕಾಪು ಹಾಗೂ ಜಿಲ್ಲಾ ಪದಾಧಿಕಾರಿ ಸಚಿತಾ ಉಪ್ಪಳ ಭಾಗವಹಿಸಿದರು.