ಅಂಬೇಡ್ಕರ್ ಸ್ಮಾರಕ ಕೇಂದ್ರ ಜಿಲ್ಲೆಯಲ್ಲಿ ಸ್ಥಾಪಿಸಲು ಬಿಜೆಪಿ ಆಗ್ರಹ
ಕಾಸರಗೋಡು: ಭೀಮ್‌ರಾವ್ ರಾಮ್‌ಜಿ ಅಂಬೇಡ್ಕರ್‌ರ ಸ್ಮಾರಕ ಕೇಂದ್ರವನ್ನು ಕಾಸರಗೋಡಿನಲ್ಲಿ ಸ್ಥಾಪಿಸಲು ಅವರ ಜನ್ಮದಿನವಾದ ಎಪ್ರಿಲ್ 14ರಂದು ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕೆಂದು ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಗ್ರಹಿಸಿದೆ. ಅಂಬೇಡ್ಕರ್ ಭಾರತದ ಜನಮಾನಸಕ್ಕೆ ಹೊಸ ದಿಕ್ಕು ತೋರಿಸಿದ ಅಸಾಮಾನ್ಯ ವ್ಯಕ್ತಿ. ಬದುಕಲ್ಲಿ ಅನೇಕ ಸವಾಲು ಎದುರಿಸಿ ಸಶಕ್ತ ಸಮಾಜ ಕಟ್ಟಿದ ಧೀಮಂತ ವ್ಯಕ್ತಿ. ಇಂತವರ ಸ್ಮರಣೆ ಮುಂದಿನ ಜನಾಂಗಕ್ಕೂ ಇರಬೇಕಿದ್ದರೆ ಸ್ಮಾರಕ, ಪ್ರತಿಮೆ, ಅಧ್ಯಯನ ಕೇಂದ್ರಗಳು ಇರಬೇಕೆಂದು ಬಿಜೆಪಿ ತಿಳಿಸಿದೆ.