ಅಖಿಲೇಶ್ ನಗುಮುಗಂರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ

ಕಾಸರಗೋಡು: ವಿವಿಧ ಸೇವೆಯನ್ನು ಪರಿಗಣಿಸಿ ಕನ್ನಡ ಭವನ ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಕಾಸರಗೋಡು, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಂಗಳೂರು ನೀಡುವ ‘ಕನ್ನಡ ಪಯಸ್ವಿನಿ’ ಪ್ರಶಸ್ತಿಗೆ ಛಾಯಾಗ್ರಾಹಕ ಪತ್ರಕರ್ತ ಅಖಿಲೇಶ್ ನಗುಮುಗಂ ಆಯ್ಕೆಯಾಗಿದ್ದಾರೆ. ನಾಳೆ ನುಳ್ಳಿಪ್ಪಾಡಿ ಕನ್ನಡ ಬಯಲುರಂಗ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ವಿಧಾನಪರಿಷತ್ ಉಪ ಸಭಾಧ್ಯಕ್ಷ ಎಂ.ಕೆ. ಪ್ರಾಣೇಶ್ ಉದ್ಘಾಟಿಸುವರು. ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು.

You cannot copy contents of this page