ನಿಡುವಲಂಪಾರ ತರವಾಡು ಕುಟುಂಬ ಸಭೆ

ಕಾಸರಗೋಡು: ನಿಡುವಲಂಪಾರ ತರವಾಡು ಕುಟುಂಬ ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು. ತರವಾಡಿನ ವಿವಿಧ ತಲೆಮಾರುಗಳ ಕುಟುಂಬ ಸದಸ್ಯರನ್ನು ಒಟ್ಟುಗೂಡಿಸಿದ ಈ ಸಭೆಯು ಕುಟುಂಬ ಸಂಬAಧ, ತರವಾಡಿನ ಸಂಪ್ರದಾಯವನ್ನು ಎತ್ತಿ ತೋರಿಸಿತು.
ನಾಗೇಶ್ ಉದಯಗಿರಿ ಅಧ್ಯಕ್ಷತೆ ವಹಿಸಿದ್ದರು. ಮಧುಸೂದನ ಪಣಿಕರ್ “ತರವಾಡು ಮತ್ತು ಕುಟುಂಬ ಸಂಬAಧಗಳು” ಎಂಬ ವಿಷಯದ ಕುರಿತು ಭಾಷಣ ಮಾಡಿದರು.
ವಿವಿಧ ಕಲೆ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಕುಟುಂಬದ ಅನೇಕ ಸದಸ್ಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಅಮೂಲ್ಯ ಕೊಡುಗೆ ನೀಡಿದ ಕುಟುಂಬದ ಹಿರಿಯ ಸದಸ್ಯರು ಮತ್ತು ತರವಾಡಿನ ತಾಯಂದಿರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮುದಾಯದ ಪ್ರತಿಭೆಗಳನ್ನು ಅಭಿನಂದಿಸಲಾಯಿತು. ಕಾರ್ನವರ್ ಗಂಗಾಧರನ್ ಬಟ್ಟಂಪಾರೆ ಶುಭ ಹಾರೈಸಿದರು. ಆಗ್ನೆಸ್ ಕಲರಿ ಸ್ವಾಗತಿಸಿದರು. ಕಾರ್ಯದರ್ಶಿ ಶಶಿ ನೆಲಪಾಡಿ ಕೃತಜ್ಞತೆ ಸಲ್ಲಿಸಿದರು.

You cannot copy contents of this page