ಕಾಸರಗೋಡು: ವ್ಯಕ್ತಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಚೆರ್ಕಳ ಪಾಡಿ ಶ್ರೀನಿಲಯಂನ ಟಿ.ಕೆ. ಕೋರನ್ ಬೆಳ್ಚಪ್ಪಾಡ (73) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ೮.೩೦ರ ವೇಳೆ ಇವರು ಮನೆ ಬಳಿಯ ಮಾವಿನ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಮನೆಯವರು ಅವರನ್ನು ಕಾಸರಗೋ ಡಿನ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತು.
ಮೃತರು ಪತ್ನಿ ಪಿ.ವಿ. ನಾರಾಯಣಿ, ಮಕ್ಕಳಾದ ಟಿ.ಕೆ. ರಾಜೇಶ್, ರಾಧಿಕ, ರತೀಶ್, ಅಳಿಯ ಸುಧಾಕರನ್ (ನೆಲ್ಕಳ ಉದಯಗಿರಿ), ಸೊಸೆಯಂದಿರಾದ ಪ್ರೇಮ, ಸೀನ, ಸಹೋದರ ನಾರಾಯಣನ್, ಸಹೋದರಿ ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






