ಖ್ಯಾತ ನ್ಯಾಯವಾದಿ ಸುಧೀರ್ ಮೇಲತ್‌ ನಿಧನ

ಕಾಸರಗೋಡು: ಕಾಸರಗೋಡು ಬಾರ್‌ನ ಖ್ಯಾತ ನ್ಯಾಯವಾದಿ ಮಾಲಕಲ್ ಸುಧೀರ್ ಮೇಲತ್ (56) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ಎರ್ನಾಕುಳಂ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಹೆಚ್ಚುವರಿ ಸರಕಾರಿ ಪ್ಲೀಡರ್, ಪಬ್ಲಿಕ್ ಪ್ರೋಸಿಕ್ಯೂಟರ್ ಆಗಿದ್ದರು. ವಿದ್ಯಾನಗರ ಲಯನ್ಸ್‌ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿ, ಮಾಜಿ ಅಧ್ಯಕ್ಷನಾಗಿದ್ದರು. ಕೇರಳ ಕಾಂಗ್ರೆಸ್ (ಎಂ) ಜಿಲ್ಲಾ ಕಾರ್ಯದರ್ಶಿಯಾಗಿಯೂ ದುಡಿದಿದ್ದರು.

ಮೃತರು ಪತ್ನಿ ರಮ್ಯ, ಮಕ್ಕಳಾದ ನಿಹಾಲ್, ಅಂಕಿತ್, ಸಹೋದರಿ ಯರಾದ ಲಲಿತ ಮೇಲತ್, ಪ್ರೀತಿ ಮೇಲತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page