ಅಗತ್ಯದ ನೌಕರರಿಲ್ಲ: ಬದಿಯಡ್ಕ ಪಂ. ಕಚೇರಿಗೆ ಬೀಗ ಹಾಕಿದ ಆಡಳಿತ ಸಮಿತಿ
ಬದಿಯಡ್ಕ: ಅತ್ಯಗತ್ಯಕ್ಕೂ ನೌಕರರ ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ಬದಿಯಡ್ಕ ಪಂಚಾಯತ್ ಕಚೇರಿಯನ್ನು ಪಂ. ಅಧ್ಯಕ್ಷೆಯ ನೇತೃತ್ವದಲ್ಲಿ ಬೀಗ ಜಡಿದು ಮುಚ್ಚಲಾಗಿದೆ.
೩೮೦ರಷ್ಟು ಅಭಿವೃದ್ಧಿ ಯೋಜನೆಗಳು ಇಂಜಿನಿಯರ್‌ನ ಕೊರತೆಯಿಂದಾಗಿ ಹಲವು ಕಾಲದಿಂದ ಮೊಟಕುಗೊಂಡಿರುವು ದಾಗಿ ಪಂ. ಅಧ್ಯಕ್ಷೆ ಹಾಗೂ ಸದಸ್ಯರು ನುಡಿದರು. ಇದರ ಹೊರತಾಗಿ ಎರಡು ಸೀನಿಯರ್ ಕ್ಲಾರ್ಕ್‌ಗಳ ಹಾಗೂ ಓರ್ವ ಅಕೌಂಟೆಂಟ್‌ನ ಹುದ್ದೆ ಖಾಲಿ ಇದೆ. ಇದು ಪಂಚಾಯತ್‌ನ ದೈನಂದಿನ ಚಟುವಟಿ ಕೆಯನ್ನು ಸ್ತಬ್ದಗೊಳಿಸಿದೆಯೆಂದು ಆರೋಪಿಸಿ ಅಧ್ಯಕ್ಷೆ ಬಿ. ಶಾಂತಾ, ಉಪಾಧ್ಯಕ್ಷ ಎಂ. ಅಬ್ಬಾಸ್ ಎಂಬಿವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪಂ. ಕಚೇರಿಗೆ ಬೀಗ ಜಡಿಯಲಾಗಿದೆ. ಅಗತ್ಯ ನೌಕರರನ್ನು ನೇಮಕಗೊಳಿಸಬೇ ಕೆಂದು ಆಗ್ರಹಿಸಿ ಒಂದು ತಿಂಗಳ ಹಿಂದೆ ಪಂಚಾಯತ್ ಆಡಳಿತ ಸಮಿತಿ ಡಿಡಿಪಿ ಕಚೇರಿಯ ಮುಂಭಾಗ ಮುಷ್ಕರ ನಡೆಸಿದ್ದರು.
ಇಂದು ನಡೆಸಿದ ಮುಷ್ಕರದಲ್ಲಿ ಎಡಪಕ್ಷದ ಮಂಡಲ ಸದಸ್ಯರು ಭಾಗವಹಿಸಲಿಲ್ಲ. ಬಿಜೆಪಿ ಇಬ್ಬರು ಸದಸ್ಯರೂ ಭಾಗವಹಿಸಿಲ್ಲ. ಅಗತ್ಯದ ನೌಕರರು ಇಲ್ಲದ ಕಾರಣ ಜಿಲ್ಲೆಯ ವಿವಿಧ ಪಂಚಾಯತ್‌ಗಳಲ್ಲಿ ಪ್ರತಿಭಟನೆ ಕಂಡುಬರುತ್ತದೆ. ಮಂಜೇಶ್ವರ ಪಂಚಾಯತ್ ಆಡಳಿತ ಸಮಿತಿಯೂ ಇದೇ ಬೇಡಿಕೆ ಮುಂದಿಟ್ಟು ಡಿಡಿಪಿ ಕಚೇರಿ ಮುಂಭಾಗ ಪ್ರತಿಭಟಿಸಿತ್ತು.