ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಅಷ್ಟಮಿ ಆಚರಣೆ
ಮಂಗಲ್ಪಾಡಿ: ಪುಳಿಕುತ್ತಿ ಸಮೀ ಪದ ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯ ಕ್ರಮಗಳೊಂದಿಗೆ ನಿನ್ನೆ ನಡೆಯಿತು. ಮಂದಿರ ಅಧ್ಯಕ್ಷ ಗೋಪಾಲ ಪೊಲೀ ಸ್ ದೀಪ ಪ್ರಜ್ವಲನೆಗೊಳಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಪದಾಧಿಕಾರಿಗಳು, ಸದಸ್ಯರು ಮಾತೆಯರು, ಮಕ್ಕಳು ಉಪಸ್ಥಿತರಿ ದ್ದರು. ಬಳಿಕ ಶ್ರೀಕೃಷ್ಣ ಹಾಗೂ ರಾಧೆಯರ ವೇಷ ಧರಿಸಿದ ಪುಟಾಣಿ ಮಕ್ಕಳ ಶೋಭಾಯಾತ್ರೆ ನಡೆಯಿತು. ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.