ಅಗಲ್ಪಾಡಿಯಲ್ಲಿ ಇಂದು ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

ಬದಿಯಡ್ಕ: ಮಾರ್ಚ್ 3ರ ತನಕ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರಗಲಿರುವ ಋಕ್‌ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾಯಾಗಕ್ಕೆ ಇಂದು ಚಾಲನೆ ದೊರೆಯಲಿದೆ. ಇಂದು ಸಂಜೆ 5 ಗಂಟೆಗೆ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಹಾಗೂ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 7 ಗಂಟೆಗೆ ಉಗ್ರಾಣಮುಹೂರ್ತ, ಚಂಡಿಕಾ ಯಾಗಶಾಲೆಯಲ್ಲಿ ವಾಸ್ತುರಾಕ್ಷೆÆÃಘ್ನ ಹೋಮ ನಡೆಯಲಿದೆ.
ಆಂದ್ರsಪ್ರದೇಶದ ಪುಂಗನೂರು ಗೋವು ಯಾಗದ ಸಂದರ್ಭದಲ್ಲಿ ಭಗವದ್ಭಕ್ತರನ್ನು ಆಕರ್ಷಿಸಲಿದೆ. ಕಾಸರಗೋಡು ಗಿಡ್ಡ ತಳಿಯ ಗೋವಿನಂತೆ ಪುಂಗನೂರು ಗೋವು ಗಿಡ್ಡತಳಿಯಾಗಿ ನೋಡಲು ಆಕರ್ಷಕವಾಗಿದೆ. ಇದರ ಹಾಲು ಅತ್ಯಂತ ಶ್ರೇಷ್ಠವಾಗಿದ್ದು ಆರೋಗ್ಯದಾಯಕವಾಗಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಗೋವನ್ನು ಆಂದ್ರsಪ್ರದೇಶದಿAದ ಕಳೆದೆರಡು ದಿನಗಳ ಹಿಂದೆ ಖರೀದಿಸಲಾಗಿತ್ತು. ಇದು ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದ ಗೋಶಾಲೆಯಲ್ಲಿ ಕಾಣಿಸಿಕೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page