ಅಗಲ್ಪಾಡಿ ಗ್ರಂಥಾಲಯದಲ್ಲಿ ಕೆಪಿಎಸ್‌ಸಿ ಮಾಹಿತಿ ಕಾರ್ಯಾಗಾರ
ಬದಿಯಡ್ಕ: ಕೇರಳ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವುದು ಹೇಗೆ, ಅದಕ್ಕಿರುವ ತಯಾರಿಯ ಕುರಿತು ಮಾಹಿತಿ ಕಾರ್ಯಾಗಾರ ಶನಿವಾರ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾಮಂದಿರದ ಸಂಸ್ಕೃತಿ ಭವನದಲ್ಲಿ ಜರಗಿತು. ಪಾಂಚ ಜನ್ಯ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ಜರಗಿದ ಕಾರ್ಯ ಕ್ರಮವನ್ನು ಕೇರಳ ಲೋಕಸೇವಾ ಆಯೋಗದ ನಿವೃತ್ತ ಕಾರ್ಯದರ್ಶಿ ಗಣೇಶ ಪ್ರಸಾದ ಪಾಣೂರು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸರಕಾರೀ ಹುದ್ದೆಗಳನ್ನು ಪಡೆಯಬೇಕಿ ದ್ದರೆ ವಿವಿಧ ಪರೀಕ್ಷೆಗಳನ್ನು ಎದುರಿಸ ಬೇಕಿದೆ. ಸರಿಯಾದ ಮಾಹಿತಿಯ ಕೊರತೆಯಿಂದ ಅನೇಕರು ಸರಕಾರೀ ಹುದ್ದೆಗಳತ್ತ ಗಮನಹರಿಸದಿರುವುದು ಖೇದಕರ ವಿಚಾರವಾಗಿದೆ. ಕನ್ನಡಿಗರು ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತ ರಾಗಬೇಕು ಎಂದರು.
ಗ್ರಂಥಾಲಯದ ಅಧ್ಯಕ್ಷ ಅಚ್ಚುತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಬಾಬುಮಾಸ್ತರ್ ಅಗಲ್ಪಾಡಿ, ಸುಧಾಮ ಪದ್ಮಾರು ಶುಭಾಶಂಸನೆಗೈದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಲಾವಣ್ಯ ಗಿರೀಶ್ ಪ್ರಾರ್ಥನೆ ಹಾಡಿದರು. ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಗಿರೀಶ್ ಅಗಲ್ಪಾಡಿ, ಚಂದ್ರ ಪದ್ಮಾರು, ಶ್ರೀಧರ ಪದ್ಮಾರು, ಶಾರದಾ ಕಲ್ಲಕಟ್ಟ ನೇತೃತ್ವ ವಹಿಸಿದ್ದರು.