ಅಗಲ್ಪಾಡಿ ಪಾಂಚಜನ್ಯ ಸಾರ್ವಜನಿಕ ಗ್ರಂಥಾಲಯ ವಾರ್ಷಿಕೋತ್ಸವ
ಬದಿಯಡ್ಕ: ಅಗಲ್ಪಾಡಿ ಜಯನಗರ ಪಾಂಚಜನ್ಯ ಸಾರ್ವಜನಿಕ ಗ್ರಂಥಾಲಯದ ಪ್ರಥಮ ವಾರ್ಷಿಕೋತ್ಸವ ಹಾಗೂ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಜರಗಿತು. ನಿವೃತ್ತ ಪ್ರಾಚಾರ್ಯ ಪ್ರೊ.ಶ್ರೀನಾಥ್ ಕೊಲ್ಲಂಗಾನ ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಪಂಚಾಯತ್ ಸದಸ್ಯ ಹರೀಶ್ ಗೋಸಾಡ, ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ನಿವೃತ್ತ ಚಿತ್ರಕಲಾ ಅಧ್ಯಾಪಕ ಬಾಲಸುಬ್ರಹ್ಮಣ್ಯ ಭಟ್ ಮಧುರಕಾನನ, ಧಾರ್ಮಿಕ ಮುಂದಾಳು ಹರಿನಾರಾಯಣ ಶಿರಂತ್ತಡ್ಕ, ವಿಹಿಂಪ ಕುಂಬ್ಡಾಜೆ ಪಂಚಾಯತ್ ಸಮಿತಿ ಸತ್ಸಂಗ ಪ್ರಮುಖ ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು ಉಪಸ್ಥಿತರಿದ್ದರು. ಪಾಂಚಜನ್ಯ ಸಾರ್ವಜನಿಕ ಗ್ರಂಥಾಲಯದ ಅಧ್ಯಕ್ಷ ಅಚ್ಯುತ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಂಥಾಲಯದ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು, ಸಂಚಾಲಕ ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು. ವಾಚನಾವಾರದ ಅಂಗವಾಗಿ ನಡೆದ ರಸಪ್ರಶ್ನೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೀಧರ ಪದ್ಮಾರ್, ಗಿರೀಶ್ ಪಿ ಕೆ ಅಗಲ್ಪಾಡಿ, ರಮ್ಯಾ ರಂಜಿತ್ ಅಗಲ್ಪಾಡಿ ಸಹಕರಿಸಿದರು.