ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಾಗ ನಾಳೆ ಮಹಾಪೂರ್ಣಾಹುತಿ
ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾ ಯಾಗ ನಾಳೆ ಮಹಾಪೂರ್ಣಾಹು ತಿಗೊಳ್ಳಲಿದೆ. ಯಾಗದ ಅಂಗವಾಗಿ ಹೋಮ ಸಹಿತ ವಿವಿಧ ಕಾರ್ಯ ಕ್ರಮಗಳು ಮಾರ್ಚ್ ೨೬ರಿಂದ ಆರಂಭಗೊಂಡಿತ್ತು. ಇಂದು ಬೆಳಿಗ್ಗೆ ದುರ್ಗಾ ಸಪ್ತಶತೀ ಪಾರಾಯಣ, ಕಲಶ ಪೀಠದಲ್ಲಿ ಮಹಾಪೂಜೆ ನಡೆಯಿತು. ನಾಳೆ ಮುಂಜಾನೆ ೫ ಗಂಟೆಗೆ ಅಗ್ನಿಪ್ರತಿಷ್ಠೆ, ಸಹಸ್ರ ಚಂಡಿ ಕಾಯಾಗ ಆರಂಭ, ಬಳಿಕ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾಯಾಗ ಮಹಾಪೂರ್ಣಾ ಹುತಿಯಾಗುವುದು. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅನ್ನಸಂ ತರ್ಪಣೆ ಬಳಿಕ ಮಹಾ ಮಂತ್ರಾಕ್ಷತೆ ನಡೆಯಲಿದೆ.