ಅಡಿಕೆ ಕೊಯ್ಯುವ ಕಾರ್ಮಿಕ ಕಂಗಿನ ಮರದಿಂದ ಬಿದ್ದು ಮೃತ್ಯು
ಪೆರ್ಲ: ಅಡಿಕೆ ಕೊಯ್ಯಲೆಂದು ಕಂಗಿನ ಮರವೇರಿದ ವ್ಯಕ್ತಿ ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಮಣಿಯಂಪಾರೆ ಪಳ್ಳಕಾನ ನಿವಾಸಿ ಸಯ್ಯದ್ ಅಲಿ (೪೫) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆ ಸಮೀಪದ ವ್ಯಕ್ತಿಯೊಬ್ಬರ ತೋಟದಲ್ಲಿ ಅಡಿಕೆ ಕೊಯ್ಯಲೆಂದು ಮರ ಹತ್ತಿದ ಇವರು ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿ ತಾದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮನೆಗೆ ತಲುಪಿಸಿದ ಬಳಿಕ ಇಂದು ಬೆಳಿಗ್ಗೆ ಬೆದ್ರಂಪಳ್ಳ ಮಸೀದಿ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತರು ಪತ್ನಿ ಹಾಜಿರ, ಮಕ್ಕಳಾದ ಸಫ್ವಾನ, ರಿಸ್ವಾನ, ಆರಿಫ್, ಫಾರಿಸ್, ಅಳಿಯ ನಿಸಾಂ, ಸಹೋದರ- ಸಹೋದರಿಯರಾದ ಅಬ್ಬಾಸ್, ಅಸ್ಮಾ, ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.