ಅಡ್ಕತ್ತಬೈಲು ಬೈದರ್ಕಳ ನೇಮೋತ್ಸವ ಸಂಪನ್ನ
ಕಾಸರಗೋಡು: ಅಡ್ಡತ್ತಬೈಲು ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ, ಪುನಃ ಪ್ರತಿಷ್ಠಾ ವಾರ್ಷಿಕೋತ್ಸವ, ಬ್ರಹ್ಮಬಲಿ ಹಾಗೂ ಬೈದರ್ಕಳ ನೇಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಈ ತಿಂಗಳ ೨೨ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಿನ್ನೆ ಸಂಜೆ ಬೈದರ್ಕಳ ಪ್ರದರ್ಶನ, ರಾತ್ರಿ ಬ್ರಹ್ಮಬಲಿ ಮತ್ತು ಬೈದರ್ಕಳ ರಂಗಸ್ಥಳಕ್ಕೆ ಇಳಿದ ಬಳಿಕ ಅನ್ನಸಂತರ್ಪಣೆ, ಆಯುಧ ಒಪ್ಪಿಸು ವಿಕೆ, ಇಂದು ಮುಂಜಾನೆ ಮಾಯಾಂ ದಳ ದೇವಿ ದರ್ಶನ, ಪೂಜಾರಿಗಳ ಸೇಟ್, ಬೈದರ್ಕಳ ಸೇಟ್, ಬಳಿಕ ಪ್ರಸಾದ ವಿತರಣೆ, ಹರಕೆ ಒಪ್ಪಿಸುವಿಕೆ ಯೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು. ಕಳೆದ ನಾಲ್ಕು ದಿನ ಗಳಿಂದ ನಡೆದ ಈ ಕಾರ್ಯಕ್ರಮ ಗಳಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಾಗವಹಿಸಿದರು