ಅಡ್ಯನಡ್ಕ ಬ್ಯಾಂಕ್ ಕಳವು: ಆರೋಪಿಯನ್ನು ಸೆರೆಹಿಡಿಯಲು ಸಹಾಯವೊದಗಿಸಿದ ಇಬ್ರಾಹಿಂ ಕೊಡ್ಯಮ್ಮೆಯವರಿಗೆ ಕರ್ನಾಟಕ ಪೊಲೀಸ್ ಗೌರವಾರ್ಪಣೆ
ಕುಂಬಳೆ: ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಿಂದ ಹಣ ಹಾಗೂ ಚಿನ್ನಾಭರಣ ಕಳವು ನಡೆಸಿದ ತಂಡವನ್ನು ಬಂಧಿಸುವಲ್ಲಿ ನಿರ್ಣಾಯಕ ಸೂಚನೆಗಳನ್ನು ನೀಡಿ ಸಹಕರಿಸಿದ ಆಟೋ ಚಾಲಕನೂ, ಸಾಮಾಜಿಕ ಕಾರ್ಯ ಕರ್ತನಾದ ಇಬ್ರಾಹಿಂ ಕೊಡ್ಯಮ್ಮೆ ಅವರನ್ನು ವಿಟ್ಲ ಪೊಲೀಸರು ಸನ್ಮಾನಿಸಿ ಗೌರವಿಸಿದರು. ಕರ್ನಾಟಕ ಪೊಲೀಸರು ಇದೇ ಮೊದಲ ಬಾರಿಗೆ ಓರ್ವ ಕೇರಳೀಯನನ್ನು ಗೌರವಿಸಿದ್ದಾರೆ.
ಕಳೆದ ತಿಂಗಳ ೭ರಂದು ರಾತ್ರಿ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಶಾಖೆಯಿಂದ ಕಳವು ನಡೆದಿದೆ. ಬ್ಯಾಂಕ್‌ನ ಹಿಂಭಾಗದ ಕಿಟಿಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು ಲಾಕರ್‌ನಲ್ಲಿದ್ದ ೨ ಕಿಲೋ ಚಿನ್ನ ಹಾಗೂ ೧೭ ಲಕ್ಷ ರೂಪಾಯಿಗಳನ್ನು ಕಳವು ನಡೆಸಿದ್ದರು. ಘಟನೆ ಬಳಿಕ ಕರ್ನಾಟಕ ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ಕರ್ನಾಟಕ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಆರೋಪಿಗಳನ್ನು ಪತ್ತೆಹಚ್ಚ ಲಿರುವ ನಿರ್ಣಾಯಕ ಮಾಹಿತಿಗಳನ್ನು ಇಬ್ರಾಹಿಂರಿಂದ ಪೊಲೀಸರು ಸಂಗ್ರಹಿ ಸಿಕೊಂಡಿದ್ದಾರೆ. ಪ್ರಸ್ತುತ ಮಾಹಿತಿಯ ಆಧಾರದಲ್ಲಿ ಜಿಲ್ಲೆಯಿಂದ ಇಬ್ಬರನ್ನು ವಿಟ್ಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಕಾಸರಗೋಡು ಚೌಕಿಯ ಕಲಂದರ್ (೪೧), ಪೈವಳಿಕೆ ಬಾಯಾರಿನ ದಯಾನಂದ (೩೭) ಎಂಬಿವರನ್ನು ಮೊದಲು ಬಂಧಿಸಲಾಗಿತ್ತು. ಅವರನ್ನು ತನಿಖೆಗೊಳಪಡಿಸಿದಾಗ ಸುಳ್ಯ ಕೊಯ್ಲದ ರಫೀಕ್ ಯಾನೆ ಗೂಡಿನಬಳಿ ರಫೀಕ್ (೩೫) ಎಂಬಾತನ ಕುರಿತು ಮಾಹಿತಿ ಲಭಿಸಿದೆ. ಬಳಿಕ ಆತನನ್ನೂ ಬಂಧಿಸಲಾಗಿದೆ. ಕಳವು ಆರೋಪಿಗಳನ್ನು ಸೆರೆಹಿಡಿಯುವುದು ಪೊಲೀಸರಿಗೆ ಭಾರೀ ಸವಾಲಾಗಿ ಪರಿಣಮಿಸಿತ್ತು. ಆದರೆ ಇಬ್ರಾಹಿಂ ನೀಡಿದ ಮಾಹಿತಿಗಳು ಪೊಲೀಸರಿಗೆ ಹೆಚ್ಚಿನ ಸಹಾಯಕವಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಸನ್ಮಾನಿಸಿದ್ದಾರೆ.
ಇಬ್ರಾಹಿಂರನ್ನು ವಿಟ್ಲ ಪೊಲೀಸ್ ಠಾಣೆಗೆ ಕೊಂಡೊಯ್ದು ಗೌರವಿಸಲಾ ಗಿದೆ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.