ಅಣಂಗೂರು ಅಂಡರ್ ಪ್ಯಾಸೇಜ್ ನಿರ್ಮಾಣ ಕೆಲಸ ಪೂರ್ಣ
ಕಾಸರಗೋಡು: ಕಾಸರಗೋಡು ನಗರದ ಅಣಂಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ಅಡಿಭಾಗದಲ್ಲಿ ನಿರ್ಮಿಸಲಾಗುತ್ತಿರುವ ಅಂಡರ್ ಪ್ಯಾಸೇಜ್‌ನ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಮಾತ್ರವಲ್ಲ ಅಂಡರ್ ಪ್ಯಾಸೇಜ್ ಮೂಲಕ ವಾಹನ ಸಂಚಾರವೂ ಈಗ ಆರಂಭಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳಲ್ಲಿರುವಸರ್ವೀಸ್ ರಸ್ತೆಗಳನ್ನು ಜೋಡಿಸುವ ರೀತಿಯಲ್ಲಿ ಈ ಅಂಡರ್ ಪ್ಯಾಸೇಜ್ ನಿರ್ಮಿಸಲಾಗಿದೆ.