ಅತ್ತೆಯ ಕೈ ಎಲುಬು ಮುರಿದ ಪ್ರಕರಣದ ಆರೋಪಿ ಸೆರೆ
ಕಾಸರಗೋಡು: ಪತ್ನಿಯ ತಾಯಿಯ ಮೇಲೆ ಹಲ್ಲೆ ನಡೆಸಿ ಅವರ ಕೈ ಎಲುಬು ಮುರಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಕುರುವಿಳದ ಪಿ. ಶಾಜಹಾನ್ (35) ಬಂಧಿತ ಆರೋಪಿ. ತನ್ನ ಮನೆಗೆ ಬಂದ ಪತ್ನಿಯ ತಾಯಿ ಆಯಿಷಾಳ ಮೇಲೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ದೂರಿನಂತೆ ಶಾಜಹಾನ್ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ಆಯಿಷಾಳನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.