ಅಧ್ಯಾಪಕನ ಕೈ ಕಡಿದ ಆರೋಪಿ ಬಗ್ಗೆ ಹೆಚ್ಚಿನ ತನಿಖೆಗೆ ಬಿಜೆಪಿ ಆಗ್ರಹ

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಮಾಸಿಕ ಸಭೆ ಮೀಯಪದವಿನಲ್ಲಿ ಜರಗಿತು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಉದ್ಘಾಟಿಸಿದರು. ತೊಡುಪುಳ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ. ಜೋಸೆಫ್‌ರ ಕೈ ಕಡಿದ ಆರೋಪಿ ಕೇರಳ ಪೊಲೀಸರ ಕಣ್ತಪ್ಪಿಸಿ ಮಂಜೇಶ್ವರದಲ್ಲಿ ವಾಸಿಸಿ, ಇಲ್ಲಿಂದ ವಿವಾಹವಾಗಿ, ನಕಲಿ ದಾಖಲೆ ಸೃಷ್ಟಿಸಿದಾಗಲೂ ಕೇರಳ ಪೊಲೀಸರ ಏನು ಮಾಡುತ್ತಿದ್ದರೆಂದು  ಬಿಜೆಪಿ ಪ್ರಶ್ನಿಸಿದೆ. ಆರೋಪಿಗೆ  ಹೆಣ್ಣು ಕೊಟ್ಟ ಮನೆಯವರನ್ನು,  ಸಂರಕ್ಷಣೆ ನೀಡಿದವರನ್ನು, ವಾಸಿಸಲು ಸಹಾಯ ಮಾಡಿದವರನ್ನು ತನಿಖೆಗೊಳಪಡಿ ಬೇಕೆಂದು ಬಿಜೆಪಿ ಆಗ್ರಹಿಸಿದೆ. ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ವಾಸಿಸುವ ಅನ್ಯ ರಾಜ್ಯ ಕಾರ್ಮಿಕರ ಬಗ್ಗೆ, ಕುಟುಂಬಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ  ಮಾಹಿತಿ ಸಂಗ್ರಹಿಸಲಾಗುತ್ತಿಲ್ಲ. ರಸ್ತೆ ಬದಿಗಳಲ್ಲಿ ಮಾರಕಾಯುಧಗಳನ್ನು ತಯಾರಿಸಿ ಮಾರಾಟ ಮಾಡಲು ಅವಕಾಶ ನೀಡಿದವರು ಯಾರೆಂದು ತನಿಖೆ  ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಸಭೆಯಲ್ಲಿ ಮುಖಂಡರಾದ ಮಣಿಕಂಠ ರೈ, ಹರಿಶ್ಚಂದ್ರ ಎಂ, ಎ.ಕೆ. ಕಯ್ಯಾರ್, ಸುಬ್ರಹ್ಮಣ್ಯ ಭಟ್, ರಕ್ಷಣ್ ಅಡೆಕ್ಕಳ, ಕೋಡಿ ಚಂದ್ರಶೇಖರ, ಲೋಕೇಶ್ ನೋಂಡಾ, ಶಂಕರನಾರಾಯಣ ಮುಂದಿಲ, ಸತ್ಯಶಂಕರ ಪೈವಳಿಕೆ, ಸದಸ್ಯರು ಉಪಸ್ಥಿತರಿದ್ದರು. ಯತಿರಾಜ್ ಶೆಟ್ಟಿ ಸ್ವಾಗತಿಸಿ, ರವಿರಾಜ್ ವರ್ಕಾಡಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page