ಅನಧಿಕೃತವಾಗಿ ಬಯಲು, ಜಲಮೂಲ ಸಮತಟ್ಟುಗೊಳಿಸಿದರೆ ಕಠಿಣ ಕ್ರಮ- ಕೆ. ರಾಜನ್
ಕಾಸರಗೋಡು: ಅನಧಿ ಕೃತವಾಗಿ ಬಯಲು, ಜಲ ಮೂಲಗಳನ್ನು ಮಣ್ಣಿಟ್ಟು ಸಮತಟ್ಟುಗೊಳಿಸುವವರ ವಿರುದ್ಧ ಕಠಿಣ ಕ್ರಮ ಸ್ವೀಕರಿಸಲಾ ಗುವುದೆಂದು ಕಂದಾಯ ಇಲಾಖೆ ಸಚಿವ ಕೆ. ರಾಜನ್ ನುಡಿದರು. ಕಾಞಂಗಾಡ್ ನಗರಸಭಾ ಟೌನ್‌ಹಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು. 2008ರಲ್ಲಿ ಬಯಲು ಸಮತಟ್ಟುಗೊಳಿಸು ವುದನ್ನು ತಡೆಯುವ ಕಾನೂನು ಜ್ಯಾರಿಗೆ ಬಂದ ಬಳಿಕ ಅನಧಿ ಕೃತವಾಗಿ ಸಮತಟ್ಟುಗೊಳಿಸಿರುವ ಭೂಮಿಯನ್ನು ಪುನರ್ ಸ್ಥಾಪಿಸುವುದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಎರಡು ಕೋಟಿ ರೂ.ನಂತೆ ರಿವೋಲ್ವಿಂಗ್ ಫಂಡ್ ಮಂಜೂರು ಮಾಡಲಾಗುವುದೆಂದು ಸಚಿವರು ನುಡಿದರು. ಅನಧಿಕೃತವಾಗಿ ಸಮತಟ್ಟುಗೊಳಿಸಿದ್ ಭೂಮಿಯ ಮಣ್ಣು ತೆರವುಗೊಳಿಸುವುದಕ್ಕೆ ಸಂಬಂಧಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಮಣ್ಣನ್ನು ತೆರವುಗೊಳಿಸದಿದ್ದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ ಆ ಭೂಮಿಯ ಮಣ್ಣನ್ನು ತೆರವುಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಿದ್ದು, ಅದಕ್ಕೆ ವೆಚ್ಚವಾಗುವ ಮೊತ್ತವನ್ನು ಸ್ಥಳದ ಮಾಲಕರಿಂದ ವಸೂಲು ಮಾಡಲಾಗುವುದು. ಅನಧಿಕೃತವಾಗಿ ಮಣ್ಣು ಹಾಕಲಾಗಿದೆ ಎಂದು ಪತ್ತೆಯಾದರೆ ಅದನ್ನು ತೆರವುಗೊಳಿಸುವುದಕ್ಕಾಗಿ ಸ್ಥಳದ ಮಾಲಕರಿಗೆ ಎರಡು ವಾರಗಳ ಗಡು ನೀಡಲಾಗುವುದು. ಆ ಬಳಿಕ ಕ್ರಮ ಕೈಗೊಳ್ಳಲಾಗುವುದು.
ಮನೆ ನಿರ್ಮಿಸಲು ಭೂಮಿ ಇಲ್ಲದವರಿಗೆ ಫೋರ್ಮ್ ನಂಬ್ರ 1ರಲ್ಲಿ ಅರ್ಜಿ ಸಲ್ಲಿಸಿದರೆ ನಗರ ಪ್ರದೇಶಗಳಲ್ಲಿ 5 ಸೆಂಟ್ಸ್‌ನಲ್ಲೂ, ಪಂಚಾಯತ್‌ಗಳಲ್ಲಿ ೧೦ ಸೆಂಟ್ಸ್‌ನಲ್ಲೂ ಮನೆ ನಿರ್ಮಿಸಲು ಭೂಮಿ ಉಪಯೋಗಿಸಬಹು ದೆಂಬ ವ್ಯವಸ್ಥೆ ಇದೆ ಎಂದು ಸಚಿವರು ನುಡಿದರು. ಭೂಮಿಯ ಉಪಯೋಗ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದರೆ ಶೀಘ್ರವೇ ಪರಿಹಾರ ಕಾಣಲು ಅದಾಲತ್ ಆಯೋಜಿಸುವು ದಾಗಿಯೂ ಸಚಿವರು ನುಡಿದರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು.