ಅನಧಿಕೃತ ಕಡವು ನಿರ್ಮಿಸಿ ಹೊಯ್ಗೆ ಸಂಗ್ರಹ: ಆರು ದೋಣಿಗಳ ನಾಶ
ಕುಂಬಳೆ: ಅನಧಿಕೃತ ಕಡವುಗಳನ್ನು ನಿರ್ಮಿಸಿ ಹೊಯ್ಗೆ ಸಂಗ್ರಹಿಸುತ್ತಿದ್ದ ಆರು ದೋಣಿಗಳನ್ನು ಕುಂಬಳೆ ಪೊಲೀಸರು ನಿನ್ನೆ ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಇಚ್ಲಂ ಗೋಡು ಪಾಚಾಣಿ, ಉಳುವಾರು ಮಾಕೂರು ಎಂಬೆಡೆಗಳಲ್ಲಿ ಹೊಯ್ಗೆ ಸಂಗ್ರಹಿಸುತ್ತಿದ್ದ ದೋಣಿಗಳನ್ನು ನಾಶಗೊಳಿ ಸಲಾಗಿದೆ. ಹೊಯ್ಗೆ ಸಂಗ್ರಹಿಸಿದ ಬಳಿಕ ದೋಣಿಗಳನ್ನು ಹೊಳೆಯ ನೀರಿನಲ್ಲಿ ಮುಳುಗಿಸಿಡಲಾಗುತ್ತಿತ್ತು. ಕುಂಬಳೆ ಎಸ್‌ಐ ವಿ.ಕೆ. ಅನೀಶ್, ಅಡಿಶನಲ್ ಎಸ್‌ಐ ಉಮೇಶ್, ಪೊಲೀಸ್ ಬಿಜು ಎಂಬಿವರು ನಿನ್ನೆ ಹೊಳೆಗೆ ತೆರಳಿ ನಡೆಸಿದ ಶೋಧ ವೇಳೆ ದೋಣಿಗಳು ಪತ್ತೆಯಾಗಿದೆ. ಬಳಿಕ ಅವುಗಳ ನ್ನು ಜೆಸಿಬಿ ಬಳಸಿ ನಾಶಪಡಿಸಲಾಗಿದೆ.