ಅನಧಿಕೃತ ಕೆಂಪುಕಲ್ಲು ಸಾಗಾಟ: ಲಾರಿ, ಜೆಸಿಬಿ ವಶ
ಮುಳ್ಳೇರಿಯ: ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ ಅನಧಿಕೃತವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಟೆಂಪೋ ಹಾಗೂ ಜೆಸಿಬಿಯನ್ನು ಮಿಂಚಿಪದವುನಿಂದ ವಶಪಡಿಸಲಾಗಿದೆ. ಕಾಸರಗೋಡಿನ ಭೂದಾಖಲೆ ತಹಶೀಲ್ದಾರ್ ಮುರಳಿ ಪಿ.ವಿ., ಆದೂರು ವಿಲ್ಲೇಜ್ ಆಫೀಸರ್ ಸತ್ಯನಾರಾಯಣ ಎ, ಕ್ಲಾರ್ಕ್ ಅಭಿಷೇಕ್ ಬಿ, ತಂಡದಲ್ಲಿದ್ದರು. ಆದೂರು ವಿಲ್ಲೇಜ್ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗಿದೆ. ವಾಹನಗಳು ಹಾಗೂ ಕಲ್ಲನ್ನು ನೆಟ್ಟಣಿಗೆ ಗ್ರೂಪ್ ವಿಲ್ಲೇಜ್ ಕಚೇರಿ ಆವರಣದಲ್ಲಿರಿಸಲಾಗಿದೆ. ಆದಿತ್ಯವಾರ ಚೇವಾರಿನಿಂದ ಅನಧಿಕೃತ ಹೊಯ್ಗೆ ಸಾಗಾಟ ಲಾರಿ, ಶನಿವಾರ ಮಂಜೇಶ್ವರ ತಾಲೂಕಿನ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿ ಆರು ವಾಹನಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಶಪಡಿಸಲಾಗಿತ್ತು.