ಅನಧಿಕೃತ ಪಟಾಕಿ ಮಾರಾಟ : ನಾಲ್ವರ ವಿರುದ್ಧ ಕೇಸು
ಮಂಜೇಶ್ವರ: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದ ಆರೋಪದಂತೆ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರಿನಿಂದ ಕುಂಜತ್ತೂರು ನಿವಾಸಿ ತೀರ್ಥೇಶ (38) ಅಂಗಡಿ ಪದವಿನಿಂದ ಬಂಗ್ರಮಂಜೇಶ್ವರ ಮಿತ್ತ ಕನಿಲ ನಿವಾಸಿ ಭರತ್ (36), ಮೀಯಪದವಿನಿಂದ ಪೈವಳಿಕೆ ಅಂಬಿಕಾನದ ಅನ್ವರ್ ಸಾದತ್ (37), ಪೈವಳಿಕೆಯ ಕಾರ್ತಿಕ್ (25) ಎಂಬಿವರಿಂದ ಪಟಾಕಿ ವಶಪಡಿಸಿ ಕೊಂಡು ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅನಧಿಕೃತವಾಗಿ ಪಟಾಕಿ ಮಾರಾಟಗೈಯ್ಯಲಾಗುತ್ತಿ ದೆಯೆಂಬ ಮಾಹಿತಿ ಮೇರೆಗೆ ಮಂಜೇಶ್ವರ ಸಿ.ಐ ಟೋನ್ಸನ್ ಜೋಸೆಫ್ ನೇತೃತ್ವದ ಪೊಲೀಸರು ನಿನ್ನೆ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ.