ಅನಧಿಕೃತ ಪ್ರಚಾರ ಸಾಮಗ್ರಿಗಳ ತೆರವು
ಕಾಸರಗೋಡು: ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜ್ಯಾರಿಗೊಳಿಸುವುದ ರಂಗವಾಗಿ ಜಿಲ್ಲೆಯಲ್ಲಿ ರೂಪೀಕರಿಸಿದ ಆಂಟಿ ಡಿಫೇರ್ಸ್ ಮೆಂಟ್ ತಂಡಗಳ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳಗಳಿಂದ ಹಾಗೂ ಖಾಸಗಿ ಸ್ಥಳಗಳಿಂದ ಅನಧಿಕೃತವಾದ 15,232 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸ ಲಾಯಿತು. ಸಾರ್ವಜನಿಕ ಸ್ಥಳಗಳಿಂ ದ 15,116 ಪ್ರಚಾರ ಸಾಮಗ್ರಿ ಗಳನ್ನು ತೆರವುಗೊಳಿಸಲಾಗಿದೆ. ಕೇಂದ್ರ ರಾಜ್ಯ ಸರಕಾರಗಳ ಸ್ವಾಧೀನವಿರುವ ಸ್ಥಳಗಳಲ್ಲಿ ಸ್ಥಾಪಿಸಿದ್ದ ಪ್ರಚಾರ ಸಾಮಗ್ರಿಗಳನ್ನು ಹೆಚ್ಚಾಗಿ ತೆರವುಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿನ 1700 ಗೋಡೆ ಬರಹಗಳನ್ನು 10,408 ಭಿತ್ತಿ ಪತ್ರಗಳನ್ನು, 937 ಬ್ಯಾನರ್, 1876 ಪತಾಕೆಗಳು, ತೋರ ಣಗಳು ತೆರವುಗೊಳಿಸಿರುವುದರಲ್ಲಿ ಸೇರಿದೆ. ಅಲ್ಲದೆ ಖಾಸಗಿ ಸ್ಥಳಗಳಿಂದ ಮಾಲಕರ ಅನುಮತಿ ರಹಿತವಾಗಿ ಸ್ಥಾಪಿಸಿದ ಪ್ರಚಾರ ಸಾಮಗ್ರಿಗಳನ್ನು ದೂರು ಲಭಿಸಿದರೆ ತೆರವುಗೊಳಿಸ ಲಾಗುವುದು. ಈ ರೀತಿಯಲ್ಲಿ ಇದುವರೆಗೆ 92 ಗೋಡೆ ಬರಹ ಗಳನ್ನು ಅಳಿಸಿ ಹಾಕಲಾಗಿದ್ದು, 11 ಭಿತ್ತಿ ಪತ್ರಗಳು, 13 ಬ್ಯಾನರ್ಗಳು, 116 ಪ್ರಚಾರ ಸಾಮಗ್ರಿಗಳನ್ನು ತಂಡ ತೆರವುಗೊಳಿಸಿದೆ.