ಅನಧಿಕೃತ ಸಂಕ ನಿರ್ಮಾಣ ಮುರಿದು ತೆಗೆಯಲು ಕ್ರಮ: ಮೊಗ್ರಾಲ್ಪುತ್ತೂರಿನಲ್ಲಿ ಬಿಜೆಪಿ ಹೋರಾಟಕ್ಕೆ ಜಯ
ಮೊಗ್ರಾಲ್ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್ಗೊಳಪಟ್ಟ ಅಕ್ಕರ ಕೊಲ್ಲಮೆ ತೋಡಿನ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿರುವ ಸಂಕವನ್ನು ಮುರಿಯುವಂತೆ ಆಗ್ರಹಿಸಿ ಬಿಜೆಪಿ ನಡೆಸಿದ ಹೋರಾಟಕ್ಕೆ ಮೊದಲ ಗೆಲುವು ಉಂಟಾಗಿದೆ. ಬಿಜೆಪಿ ವಾರ್ಡ್ ಸದಸ್ಯ ಪ್ರಮೀಳಾ ಮಜಾಲ್ರ ನೇತೃತ್ವದಲ್ಲಿ ಮೊನ್ನೆ ಪಂಚಾಯತ್ ಕಚೇರಿ ಮುಂದೆ ಹೋರಾಟ ನಡೆಸಲಾಗಿತ್ತು.
ಅನಧಿಕೃತವಾಗಿ ನಿರ್ಮಿಸಲಾಗಿ ರುವ ಪ್ರಸ್ತುತ ಸಂಕವನ್ನು ಮುಂದಿನ ಏಳು ದಿನಗಳೊಳಗೆ ಮುರಿದು ತೆಗೆಯಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದು ಮೊಗ್ರಾಲ್ ಪುತ್ತೂರು ಪಂಚಾಯತ್ ಕಾರ್ಯದರ್ಶಿ ವಾರ್ಡು ಬಿಜೆಪಿ ಸದಸ್ಯೆ ಯರೂ, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಮೀಳಾ ಮಜಾಲ್ರಿಗೆ ಲಿಖಿತ ಭರವಸೆ ನೀಡಿದ್ದಾರೆ. ನಿಗದಿದ ಅವಧಿ ಯೊಳಗೆ ಸಂಕವನ್ನು ತೆರವುಗೊಳಿಸ ದಿದ್ದಲ್ಲಿ ಮತ್ತೆ ಹೋರಾಟಕ್ಕಿಳಿಯಲಾಗು ವುದೆಂದು ಬಿಜೆಪಿ ಮುನ್ನೆಚ್ಚರಿಕೆ ನೀಡಿದೆ.ಅನಧಿಕೃತ ಸಂಕವನ್ನು ಮುರಿದು ತೆಗೆಯುವಂತೆ ಆಗ್ರಹಿಸಿ ತಿರುವನಂತಪುರ ಭೂಕಂದಾಯ ಆಯುಕ್ತರಿಗೂ ಬಿಜೆಪಿ ಮನವಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಆಯುಕ್ತರು ಅದಕ್ಕೆ ಹೊಂದಿಕೊಂಡು ಅಗತ್ಯದ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಕಾರ್ಯದರ್ಶಿಗೆ ನಿರ್ದೇಶ ನೀಡಿದ್ದರು. ಆ ಹಿನ್ನೆಲೆಯಲ್ಲಿ ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂಬ ಭರವಸೆಯನ್ನು ಪಂಚಾಯತ್ ಕಾರ್ಯದರ್ಶಿ ಬಿಜೆಪಿಗೆ ತಿಳಿಸಿದ್ದಾರೆ.