ಅನಿವಾಸಿಗಳಿಗೆ ಡ್ರೈವಿಂಗ್ ಟೆಸ್ಟ್ ವೇಳೆ ಪ್ರತ್ಯೇಕ ಪರಿಗಣನೆ ನೀಡಲು ಆರ್‌ಟಿಒಗೆ ನಿರ್ದೇಶ
ಉಪ್ಪಳ: ಕಾಸರಗೋಡು ಆರ್‌ಟಿಒ ದಲ್ಲಿ ಚಾಲನೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದರೆ ಲರ್ನ್ ಟೆಸ್ಟ್‌ಗೆ ೩೦ ದಿನ ಹಾಗೂ ಪ್ರಾಕ್ಟಿಕಲ್ ಟೆಸ್ಟ್‌ಗೆ ೬೦ ದಿವಸ ಕಾದು ಕುಳಿತಿರಬೇಕಾದ ಸನ್ನಿವೇಶವಿದ್ದು, ಇದು ವಿದೇಶದಲ್ಲಿ ನೌಕರಿಯಲ್ಲಿರು ವವರಿಗೆ ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿ ಶಾಸಕ ಎಕೆಎಂ ಅಶ್ರಫ್ ಸಾರಿಗೆ ಇಲಾಖೆ ಸಚಿವ ಗಣೇಶ್ ಕುಮಾರ್‌ರಿಗೆ ನೀಡಿದ ಮನವಿಯ ಫಲವಾಗಿ ವಿಸಾ, ಏರ್ ಟಿಕೆಟ್ ಎಂಬಿವುಗಳನ್ನು ಹಾಜರು ಪಡಿಸುವ ಕೆಲಸ ಮಾಡುತ್ತಿರುವ ಭಾರತೀಯರಿಗೆ ಪ್ರತ್ಯೇಕ ಪರಿಗಣನೆ ನೀಡಿ ಅವರ ಸೌಕರ್ಯಾ ರ್ಥ ಲರ್ನರ್ಸ್ ಟೆಸ್ಟ್ ಹಾಜರಾಗುವ ದಿನಾಂಕವನ್ನು, ಆ ಬಳಿಕ ಪ್ರಾಕ್ಟಿಕಲ್ ಟೆಸ್ಟ್ ೩೦ ದಿನದ ಒಳಗೆ ನಡೆಸಬೇಕೆಂದು ಕಾಸರಗೋಡು ಆರ್‌ಟಿಒಗೆ ಸಾರಿಗೆ ಕಮಿಷನರ್ ನಿರ್ದೇಶ ನೀಡಿದ್ದಾರೆ.
ವಿದೇಶದ ನೌಕರಿಯಲ್ಲಿನ ಒಂದು ತಿಂಗಳ ರಜೆಯಲ್ಲಿ ಊರಿಗೆ ತಲುಪುವ ವರಿಗೆ ಚಾಲನಾ ಪರವಾನಗಿ ಪಡೆಯಲು ಸಮಸ್ಯೆಯಾಗುತ್ತಿದ್ದುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.