ಅನುದಾನಿತ ವಲಯದ ಶಿಕ್ಷಕರ ವೇತನ ಮೊಟಕುಗೊಳಿಸುವ ಆದೇಶ ಹಿಂಪಡೆಯಬೇಕು- ಎನ್ಜಿಒ ಸಂಘ್
ಕಾಸರಗೋಡು: ಕೇರಳ ಅನುದಾನಿತ ವಲಯದ ಶಿಕ್ಷಕರ ಮತ್ತು ಶಿಕ್ಷಕೇತರರ ವೇತನ ಬಿಲ್ ಸಲ್ಲಿಕೆಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹಿಂಪಡೆಯಬೇಕು ಎಂದು ಕೇರಳ ಎನ್ಜಿಒ ಸಂಘ್ ಜಿಲ್ಲಾ ಸಮಿತಿ ಆಗ್ರಹಿಸಿದೆ. ಖಜಾನೆಗೆ ನೇರವಾಗಿ ವೇತನದ ಬಿಲ್ ಸಲ್ಲಿಸುವ ಬದಲು ಆಯಾ ಸಂಸ್ಥೆಗಳ ಮುಖ್ಯಸ್ಥರು ಅಕ್ಟೋಬರ್ನಿಂದ ಜಿಲ್ಲಾ ಶಿಕ್ಷಣಾಧಿಕಾರಿಗಳ ಸಹಿ ಮಾಡುವಂತೆ ಆದೇಶಿಸಲಾಗಿದೆ. ಇದನ್ನು ಜ್ಯಾರಿಗೊಳಿಸುವ ಮೂಲಕ ನೌಕರರ ವೇತನ ಹಾಗೂ ಇತರ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಎನ್ಜಿಒ ಸಂಘ್ ಜಿಲ್ಲಾಧ್ಯಕ್ಷ ಕೆ. ರಂಜಿತ್ ಆರೋಪಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹರೀಶ್ ಅಗಲ್ಪಾಡಿ, ಬಾಲಕೃಷ್ಣ ಸೀತಾಂಗೋಳಿ, ವಿನಯ ಭಾರಾಧ್ವಾಜ್, ರಾಧಾಕೃಷ್ಣ ಎ.ಎನ್, ಅಭಿಲಾಷ್ ನೆಲ್ಯಡ್ಕ, ತುಳಸೀಧರನ್ ಟಿ, ರವಿ ಕುಮಾರ್ ಕೆ, ಸುರೇಶ್ ನಾಯ್ಕ್ ಮಾತನಾಡಿದರು.