ಅನ್ಯರಾಜ್ಯ ಕಾರ್ಮಿಕ ಕುಸಿದು ಬಿದ್ದು ಮೃತ್ಯು
ಉಪ್ಪಳ: ಬಿಹಾರ ನಿವಾಸಿ ಹಾಗೂ ತೂಮಿನಾಡು ಫ್ಲೈವುಡ್ ಫ್ಯಾಕ್ಟರಿಯಲ್ಲಿ ಈ ಹಿಂದೆ ಕಾರ್ಮಿಕನಾಗಿದ್ದ ಪ್ರವೀಣ್ ಕುಮಾರ್ (38) ಕುಸಿದು ಬಿದ್ದು ಮೃತಪಟ್ಟರು. ಬಿಹಾರ ನಿವಾಸಿ ರಾಮ್ ನಂದನ್ ರಾಯ್ರ ಪುತ್ರನಾಗಿದ್ದಾರೆ. ಇವರ ಸಹೋದರ ರಾಮ್ಪ್ರವೇಶ್ ರಾಯ್ ತೂಮಿನಾಡು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಜೊತೆಯಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಕುಸಿದು ಬಿದ್ದ ಇವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಈ ಬಗ್ಗೆ ಸಹೋದರ ಮಂ ಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತದೇಹ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಶವಾಗಾರ ದಲ್ಲಿರಿಸಲಾಗಿದೆ.