ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು
ಕಾಸರಗೋಡು: ಎರಡು ವಾರದ ಹಿಂದೆ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಉದುಮ ಪಳ್ಳಂ ತೆಕ್ಕೇಕರೆ ಶ್ರೀಲಯ ನಿವಾಸಿ ಟಿ.ಕೆ. ಅಭಿಷೇಕ್ (19) ಮೃತಪಟ್ಟ ಯುವಕ. ಕಳೆದ ೪ರಂದು ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಪೂಚಕ್ಕಾಡ್ನಲ್ಲಿ ಅಭಿಷೇಕ್ ಹಾಗೂ ಗೆಳೆಯ ಸಂಚರಿಸಿದ ದ್ವಿಚಕ್ರ ವಾಹನ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಅಭಿಷೇಕ್ ಈಗ ಮೃತಪಟ್ಟಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಗೆಳೆಯನೂ ಗಾಯಗೊಂಡಿದ್ದಾನೆ. ನಿನ್ನೆ ರಾತ್ರಿ ಸಾವು ಸಂಭವಿಸಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಚೆಂಡ ಗೋಪಾಲ- ಸುಜಾತ ದಂಪತಿ ಪುತ್ರನಾಗಿದ್ದಾನೆ. ಮೃತ ಯುವಕ ಸಹೋದರ ನಿತೀಶ್, ಸಹೋದರಿ ಲಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.