ಅಪರಿಮಿತ ಬಿಲ್: ಕುಡಿಯುವ ನೀರು ಫಲಾನುಭವಿಗೆ ವಾಟರ್ ಅಥಾರಿಟಿ ನೀಡಿದ ಬಿಲ್ ಅಸಿಂಧುಗೊಳಿಸಿ ಗ್ರಾಹಕರ ತರ್ಕ ಪರಿಹಾರ ಫಾರಂ ನಿರ್ದೇಶ
ಕಾಸರಗೋಡು: ಕುಡಿಯುವ ನೀರು ಫಲಾನುಭವಿಗೆ ಕೇರಳ ವಾಟರ್ ಅಥಾರಿಟಿ ಎರಡು ತಿಂಗಳಿಗೆ ಮಿತಿಗಿಂ ತಲೂ ಹೆಚ್ಚಿನ ಮೊತ್ತ ಪಾವತಿಸುವಂತೆ ತಿಳಿಸಿ ನೋಟೀಸು ನೀಡಿದ್ದು ಅದನ್ನು ಗ್ರಾಹಕರ ತರ್ಕ ಪರಿಹಾರ ಫಾರಂ ಅಸಿಂಧುಗೊಳಿಸಿದೆ. ಮಾತ್ರವಲ್ಲ ದೂರುಗಾರನಾದ ಕುಡಿಯುವ ನೀರು ಫಲಾನುಭವಿಗೆ ವಾಟರ್ ಅಥಾರಿಟಿ ೩೦ ದಿನಗಳೊಳಗಾಗಿ ೫೦೦೦ ರೂಪಾಯಿ ನಷ್ಟ ಪರಿಹಾರ ನೀಡುವಂತೆ ತಿಳಿಸಿದೆ.
ಇದರಂತೆ ಕಾಸರಗೋಡು ಪಿಲಿ ಕುಂಜೆ ಕ್ಷೇತ್ರ ರಸ್ತೆ ಶ್ರೀ ಕೃಷ್ಣ ನಿವಾಸ್ನ ಕೆ. ಬಾಲಕೃಷ್ಣ ರಾವ್ರಿಗೆ ಕೇರಳ ವಾಟರ್ ಅಥಾರಿಟಿಯ ಡಬ್ಲ್ಯುಎಸ್ಪಿ ಸಬ್ ಡಿವಿಶನ್ ೫೦೦೦ ರೂಪಾಯಿ ನಷ್ಟ ಪರಿಹಾರ ನೀಡಬೇಕಾಗಿದೆ.
ಕೆ. ಬಾಲಕೃಷ್ಣ ರಾವ್ ಕೇರಳ ವಾಟರ್ ಅಥಾರಿಟಿಯ ಕುಡಿಯುವ ನೀರು ಫಲಾನುಭವಿಯಾಗಿದ್ದಾರೆ. ಇವರು ಪ್ರತಿತಿಂಗಳು ಸರಾಸರಿ ೨೬೪ ಯೂನಿಟ್ ನೀರು ಬಳಸುತ್ತಿದ್ದರು. ಆದರೆ ೨೦೨೨ ಎಪ್ರಿಲ್ ೧೨ರಂದು ನೀಡಿದ ಬಿಲ್ನಲ್ಲಿ ಎರಡು ತಿಂಗಳ ಮೊತ್ತವಾಗಿ ೮೩೫೬ ರೂಪಾಯಿ ಪಾವತಿಸುವಂತೆ ತಿಳಿಸಲಾಗಿದೆ. ಇದರ ವಿರುದ್ಧ ಬಾಲಕೃಷ್ಣ ರಾವ್ ವಾಟರ್ ಅಥಾರಿಟಿಯನ್ನು ಸಂಪರ್ಕಿಸಿ ವಿಚಾರಿಸಿದರೂ ಸೂಕ್ತ ಉತ್ತರ ಲಭಿಸಿಲ್ಲ. ಆದರೆ ಮೊತ್ತ ಪಾವತಿಸಬೇಕೆಂದು ತಿಳಿಸಿದ ಹಿನ್ನೆಲೆಯಲ್ಲಿ ಬಾಲಕೃಷ್ಣ ರಾವ್ ಗ್ರಾಹಕರ ತರ್ಕ ಪರಿಹಾರ ಫಾರಂನ್ನು ಸಮೀಪಿಸಿದ್ದರು. ಇದರಂತೆ ವಾಟರ್ ಅಥಾರಿಟಿಯ ಕಾಸರಗೋಡು ಡಬ್ಲ್ಯುಎಸ್ಪಿ ಸಬ್ ಡಿವಿಶನ್ನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ರನ್ನು ಗ್ರಾಹಕರ ತರ್ಕ ಪರಿಹಾರ ಫಾರಂ ನೀರಿನ ಯೂನಿಟ್ ದಿಢೀರ್ ಹೆಚ್ಚಿಸಲು ಕಾರಣವೇನೆಂದು ವಿಚಾರಿಸಿದಾಗ ಸೂಕ್ತ ಉತ್ತರ ಲಭಿಸಿಲ್ಲವೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಾಟರ್ ಅಥಾರಿಟಿ ಬಾಲಕೃಷ್ಣ ರಾವ್ಗೆ ನೀಡಿದ ನೀರಿನ ಬಿಲ್ ಅಸಿಂಧು ಗೊಳಿಸಿದ್ದಲ್ಲದೆ ಅವರಿಗೆ ೫೦೦೦ ರೂಪಾಯಿ ನಷ್ಟ ಪರಿಹಾರ ನೀಡುವಂತೆಯೂ ತಿಳಿಸಲಾಗಿದೆ.