ಅಪರಿಮಿತ ಮದ್ಯಸಹಿತ ಓರ್ವ ಸೆರೆ
ಸೀತಾಂಗೋಳಿ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಕಟ್ಟೆ ನಿವಾಸಿ ಗೋಪಾಲಕೃಷ್ಣ (50)ನನ್ನು ಕುಂಬಳೆ ಎಸ್.ಐ. ಕೆ. ಸೃಜೇಶ್ ಬಂಧಿಸಿದ್ದಾರೆ. ನಿನ್ನೆ ಸಂಜೆ ಸೀತಾಂಗೋಳಿಯಲ್ಲಿ 6 ಲೀಟರ್ ಕೇರಳ ನಿರ್ಮಿತ ವಿದೇಶಿ ಮದ್ಯ ಕೈವಶವಿರಿಸಿ ಕೊಂಡ ಆರೋಪದಂತೆ ಗೋಪಾಲಕೃಷ್ಣನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.