ಅಪಾಯ ಭೀತಿ: ಕಂಚಿಕಟ್ಟೆ ಸೇತುವೆ ಮೂಲಕ ವಾಹನ ಸಂಚಾರ ನಿಷೇಧ
ಕುಂಬಳೆ: ಐದು ವರ್ಷಗಳ ಹಿಂದೆ ಅಪಾಯ ಭೀತಿಯಲ್ಲಿದೆಯೆಂದು ತಿಳಿಸಿ ಫಲಕ ಸ್ಥಾಪಿಸಿದ ಕಂಚಿಕಟ್ಟೆ ಸೇತುವೆ ಮೂಲಕ ವಾಹನ ಸಂಚಾರವನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಸೇತುವೆಯ ಕಾಂಕ್ರೀಟ್ ಕಂಬಗಳು ಬಲಹೀನಗೊಂಡಿದ್ದು, ಸರಳುಗಳು ತುಕ್ಕು ಹಿಡಿದು ಹೊರಗೆ ಗೋಚರಿಸುತ್ತಿವೆ. ಸೇತುವೆಯ ಆವರಣ ಕೂಡಾ ನಾಶದ ಹಂತದಲ್ಲಿದೆ. ಐದು ವರ್ಷಗಳ ಹಿಂದೆಯೇ ಸೇತುವೆ ಅಪಾಯಕಾರಿ ಸ್ಥಿತಿಗೆ ತಲುಪಿತ್ತು.
ಅಂದು ಕಾಸರಗೋಡಿನಿಂದ ಇಂಜಿನಿಯರ್‌ಗಳು ತಲುಪಿ ಸೇತುವೆ ಪರಿಶೀಲಿಸಿದ್ದು, ಅಪಾಯಕ್ಕೆ ಸಾಧ್ಯತೆ ಇದೆಯೆಂದು ಮುನ್ನೆಚ್ಚರಿಕೆ ನೀಡಿದ್ದರು. ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ವಾಹನಗಳಿಗೆ ಈ ಸೇತುವೆ ಮೂಲಕ ಸಂಚಾರಕ್ಕೆ ನಿಷೇಧ ಹೇರಿ ಫಲಕ ಸ್ಥಾಪಿಸಲಾ ಗಿತ್ತು. ಆದರೆ ೨೦ ದಿನಗಳ ಹಿಂದೆವ ರೆಗೆ ಸೇತುವೆ ಮೂಲಕ ಬಸ್‌ಗಳ ಸಹಿತ ಘನ ವಾಹನಗಳು ಸಂಚರಿಸಿ ದ್ದವು. ಇಂದು ಕೂಡಾ ಘನ ವಾಹನ ಗಳು ಈ ಸೇತುವೆ ಮೂಲಕ ಸಂಚರಿ ಸಿವೆ. ಸಾರಿಗೆ ನಿಷೇಧ ಹೇರಿರುವು ದಾಗಿ ಆದೇಶ ಹೊರಡಿಸಿರುವುದಲ್ಲದೆ ವಾಹನ ಸಂಚಾರ ತಡೆಯಲಿರುವ ಕ್ರಮ ಕೈಗೊಳ್ಳದಿರುವುದು ಇದಕ್ಕೆ ಕಾರಣವಾಗಿ ಹೇಳಲಾಗುತ್ತಿದೆ.