ಅಪಾರ್ಟ್ಮೆಂಟ್ ಬಳಿ ನಿಲ್ಲಿಸಿದ್ದ ಬೈಕ್ ಕಳವು
ಉಪ್ಪಳ: ಮಂಜೇಶ್ವರದಲ್ಲಿ ಅಪಾರ್ಟ್ಮೆಂಟ್ವೊಂದರ ಸಮೀಪ ನಿಲ್ಲಿಸಿದ್ದ ಬೈಕ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಮಂಜೇಶ್ವರ ಚೌಕಿಯ ಅಪಾರ್ಟ್ ಮೆಂಟ್ನಲ್ಲಿ ವಾಸಿಸುವ ಹನೀಫ್ ಎಂಬವರ ಬೈಕ್ ಕಳವಿಗೀಡಾ ಗಿದೆ. ಅಪಾರ್ಟ್ಮೆಂಟ್ ಸಮೀಪ ಮೊನ್ನೆ ರಾತ್ರಿ ನಿಲ್ಲಿಸಿದ್ದ ಬೈಕ್ ನಿನ್ನೆ ಬೆಳಿಗ್ಗೆ ನೋಡಿದಾಗ ನಾಪತ್ತೆಯಾಗಿದೆ. ಇಲ್ಲಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮೊನ್ನೆ ರಾತ್ರಿ ವ್ಯಕ್ತಿಯೋರ್ವ ತಲುಪಿ ಬೈಕ್ ಕೊಂಡೊಯ್ಯುವ ದೃಶ್ಯ ಪತ್ತೆಯಾಗಿದೆ. ಈ ಬಗ್ಗೆ ಹನೀಫ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಂಡು ಬರುವ ವ್ಯಕ್ತಿಯಾರೆಂದು ತಿಳಿಯಲಿರುವ ಪ್ರಯತ್ನ ಮುಂದುವರಿಯುತ್ತಿದೆ.