ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಮೂವರ ವಿರುದ್ಧ ಪೋಕ್ಸೋ ಕೇಸು ದಾಖಲು
ಕಾಸರಗೋಡು: ಇನ್ ಗ್ರಾಂನಲ್ಲಿ ಪರಿಚಯಗೊಂಡ ಪ್ರಾಯಪೂರ್ತಿಯಾಗದ ಬಾಲಕಿಯ ಮನೆಗೆ ಸಾಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಚಿತ್ತಾರಿಕಲ್ ಪೊಲೀಸರು ಮೂವರ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಕಲ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟವರೆಂದು ಹೇಳಲಾಗುತ್ತಿರುವ ಶರಣ್, ನಿತಿನ್ ಮತ್ತು ಅಬಿನ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಆ ಬಾಲಕಿಯನ್ನು ಶಾಲೆಯಲ್ಲಿ ಕೌನ್ಸಿಲಿಂಗ್ಗೊಳಪಡಿಸಿದಾಗ ಆಕೆ ತಾನು ಲೈಂಗಿಕ ಕಿರುಕು ಕ್ಕೊಳಗಾದ ವಿಷಯವನ್ನು ತಿಳಿಸಿದ್ದಳು. ಅದರಂತೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ.