ಅಬಕಾರಿ ದಾಳಿ: ನಕಲಿ, ಕರ್ನಾಟಕ ಮದ್ಯ ಪತ್ತೆ; ಇಬ್ಬರ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡು ಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ ಐದು ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಕರ್ನಾಟಕ ನಿರ್ಮಿ ತ ಮದ್ಯ ಪತ್ತಹಚ್ಚಿ ವಶಪಡಿಸಿ ಕೊಂಡಿದೆ.
ಬದಿಯಡ್ಕ ಅಬಕಾರಿ ರೇಂಜ್ನ ಇನ್ಸ್ಪೆಕ್ಟರ್ ದಿನೇಶನ್ ಕೆ ನೇತೃತ್ವದ ತಂಡ ಬಾಂಜತ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಕುಂಟಾಲು ಮೂಲೆಯ ಬಾಲಕೃಷ್ಣನ್ ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮೋಹನ್ ಕುಮಾರ್, ಜನಾರ್ದ ನನ್, ಜೋಬಿ ಕೆ.ಎ ಮತ್ತು ಸಾಬಿತ್ ಲಾಲ್ ವಿ.ಕೆ ಒಳಗೊಂಡಿದ್ದರು.
ಇನ್ನೊಂದೆಡೆ ಕಾಸರಗೋಡು ನುಳ್ಳಿಪ್ಪಾಡಿ ಬದಿಬಾಗಿಲಿನಲ್ಲಿ ಕಾಸರ ಗೋಡು ಅಬಕಾರಿ ರೇಂಜ್ ಕಚೇ ರಿಯ ಪ್ರಿವೆಂಟೀವ್ ಆಫೀಸರ್ ಎ.ವಿ. ರಾಜೀವ್ರ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ ೧.೨೬ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ನುಳ್ಳಿಪ್ಪಾಡಿಯ ಬಾಬು ಪೂಜಾರಿ (೫೮) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಿವೆಂ ಟಿವ್ ಆಫೀಸರ್ ಕೆ.ವಿ. ರಂಜಿತ್ ಕಣ್ಣನ್ ಕುಂಞಿ, ಸಿಇಒಗಳಾದ ಧನ್ಯ ಟಿ, ಫಸೀಲಾ ಟಿ, ಸುಮೋದ್ ಕುಮಾರ್ ಎಂ.ವಿ ಎಂಬಿವರು ಈ ಅಬಕಾರಿ ದಾಳಿ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು. ಬಂಧಿತ ಆರೋಪಿಯನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.