ಅಬ್ಬಾಸ್ ಬೀಗಂ ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷ
ಕಾಸರಗೋಡು: ಕಾಸರಗೋಡು ನಗರಸಭೆಯ ಹೊಸ ಅಧ್ಯಕ್ಷರನ್ನಾಗಿ ಮುಸ್ಲಿಂ ಲೀಗ್‌ನ ಅಬ್ಬಾಸ್ ಬೀಗಂರನ್ನು ಆರಿಸಲಾಗಿದೆ. ನಗರಸಭಾ ಚುನಾವಣೆಯ ವೇಳೆ ಮುಸ್ಲಿಂ ಲೀಗ್ ಮಾಡಿಕೊಂಡಿದ್ದ ಪೂರ್ವಹೊಂದಾಣಿಕೆಯ ಪ್ರಕಾರ ಅಬ್ಬಾಸ್ ಬೀಗಂರನ್ನು ಹೊಸ ನಗರಸಭಾ ಅಧ್ಯಕ್ಷರನ್ನಾಗಿ ನೇಮಿಸುವ ತೀರ್ಮಾನ ಮುಸ್ಲಿಂ ಲೀಗ್ ಜಿಲ್ಲಾ ಸಂಸದೀಯ ಮಂಡಳಿ ಸಭೆ ಕೈಗೊಂಡಿದೆ.
ಈ ಹಿಂದೆ ಮಾಡಿಕೊಳ್ಳಲಾದ ಹೊಂದಾಣಿಕೆ ಪ್ರಕಾರ ಕಾಸರಗೋಡು ನಗರಸಭೆಯ ಮೊದಲ ಎರಡೂವರೆ ವರ್ಷ ನಗರಸಭಾ ಅಧ್ಯಕ್ಷ ಸ್ಥಾನವನ್ನು ನ್ಯಾ. ವಿ.ಎಂ. ಮುನೀರ್‌ರಿಗೂ ನಂತರದ ಎರಡೂವರೆ ವರ್ಷ ಅಬ್ಬಾಸ್ ಬೀಗಂರಿಗೆ ವಹಿಸಿಕೊಡುವ ತೀರ್ಮಾನ ಮುಸ್ಲಿಂ ಲೀಗ್ ಕೈಗೊಂಡಿತ್ತು. ಅದರಂತೆ ನಗರಸಭಾ ಅಧ್ಯಕ್ಷರಾಗಿರುವ ವಿ.ಎಂ. ಮುನೀರ್‌ರ ಆಡಳಿತ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಅದರಂತೆ ಪೂರ್ಣ ಹೊಂದಾಣಿಕೆಯ ಪ್ರಕಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನವನ್ನು ಅಬ್ಬಾಸ್ ಬೀಗಂರಿಗೆ ವಹಿಸಿಕೊಡಲಾಗು ವುದು. ಅಧ್ಯಕ್ಷ ಸ್ಥಾನವನ್ನು ಹಂಚುವ ವಿಷಯದಲ್ಲಿ ಮುಸ್ಲಿಂ ಲೀಗ್‌ನಲ್ಲಿ ಈ ಹಿಂದೆ ಕೆಲವೊಂದು ಬಿನ್ನಾಭಿಪ್ರಾಯ ಗಳು ತಲೆಯೆತ್ತಿತ್ತು. ಕಾಸರಗೋಡು ನಗರಸಭೆಗೆ ಆಯ್ಕೆಗೊಂಡ ಮುಸ್ಲಿಂ ಲೀಗ್ ಕೌನ್ಸಿಲರ್‌ಗಳಲ್ಲಿ ಬಹುಪಾಲು ಮಂದಿ ತಳಂಗರೆಯವರಾಗಿದ್ದು ಆದ್ದರಿಂದ ತಳಂಗರೆಯಿಂದ ಗೆದ್ದ ಕೌನ್ಸಿಲರ್‌ಗಳಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ವಾದವನ್ನು ಲೀಗ್‌ನ ಕೆಲವರು ಮುಂದಿರಿಸಿದ್ದರು.