ಅಭಿಭಾಷಕ ಪರಿಷತ್‌ನಿಂದ ಕಾನೂನು ದಿನಾಚರಣೆ
ಕಾಸರಗೋಡು: ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋ ಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾನೂನು ದಿನದಂಗವಾಗಿ ನಿನ್ನೆ ವಿದ್ಯಾ ನಗರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಚಾರಗೋಷ್ಠಿ ನಡೆಯಿತು. ಪಿ. ಅನಂತಕೃಷ್ಣ ಭಟ್ ಉದ್ಘಾಟಿಸಿದರು. ಪರಿಷತ್‌ನ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ನ್ಯಾಯವಾದಿಗಳಾದ ಬಿ. ರವೀಂದ್ರನ್, ಅನಂತರಾಮ, ಕರುಣಾಕರನ್ ನಂಬ್ಯಾರ್, ಕೆ. ಮಣಿಕಂಠನ್, ಕೆ.ಎಂ. ಬೀನ ಭಾಗವಹಿಸಿದರು.