ಅಭ್ಯರ್ಥಿ ನಿರ್ಣಯ ಚರ್ಚೆ ಸಕ್ರಿಯ: ಕಾಸರಗೋಡಿನಲ್ಲಿ ಟಿ.ವಿ. ರಾಜೇಶ್‌ರ ಹೆಸರು ಸಿಪಿಎಂ ಪರಿಗಣನೆಯಲ್ಲಿ
ಕಾಸರಗೋಡು: ಎಡ-ಐಕ್ಯರಂ ಗಗಳಲ್ಲಿ ಅಭ್ಯರ್ಥಿ ನಿರ್ಣಯ ಚರ್ಚೆಗಳು ಸಕ್ರಿಯಗೊಂಡಿದೆ. ಕಳೆದ ಬಾರಿ ಯುಡಿಎಫ್ ಕಸಿದುಕೊಂಡಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎಲ್‌ಡಿಎಫ್ ಅಭ್ಯರ್ಥಿ ಯಾಗಿ ಟಿ.ವಿ. ರಾಜೇಶ್ ಕಣಕ್ಕಿಳಿಯುವ ಸಾಧ್ಯತೆಯಿದೆ. ನಾಯಕತ್ವ ಮಟ್ಟದಲ್ಲಿ ಈಗಾಗಲೇ ನಡೆದ ಚರ್ಚೆಗಳಲ್ಲಿ ಟಿ.ವಿ. ರಾಜೇಶ್‌ರ ಹೆಸರಿಗೆ ಆದ್ಯತೆ ಲಭಿಸಿದೆ. ಇವರು ಎರಡು ಬಾರಿ ಪಯ್ಯನ್ನೂರು ವಿಧಾನ ಸಭಾ ಕ್ಷೇತ್ರದಿಂದ ಚುನಾಯಿ ತರಾಗಿದ್ದರು.
ಟಿ. ಗೋವಿಂದನ್‌ರ ಬಳಿಕ ಕಣ್ಣೂರು ಜಿಲ್ಲೆಯಿಂದ ಯಾರು ಕೂಡಾ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಗಳಾಗಿಲ್ಲ. ಕಳೆದ ಬಾರಿ ನಷ್ಟಗೊಂಡ ಮಂಡಲವನ್ನು ಮರಳಿ ಪಡೆಯಬೇಕಾದರೆ ಈ ಬಾರಿ ಪ್ರಬಲ ಅಭ್ಯರ್ಥಿ ಬೇಕೆಂದೂ ಅದು ಕಣ್ಣೂರು ಜಿಲ್ಲೆಯ ನೇತಾರನಾಗಿರ ಬೇಕೆಂದು ಚರ್ಚೆಯಲ್ಲಿ ಕೇಳಿ ಬಂದಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯದಲ್ಲಿ ಆದ್ಯತೆ ಲಭಿಸಿದಲ್ಲಿ ಟಿ.ವಿ. ರಾಜೇಶ್ ಕಾಸರಗೋಡಿನಲ್ಲಿ ಅಭ್ಯರ್ಥಿಯಾಗಲಿದ್ದಾರೆ.
ಇದೇ ವೇಳೆ ಕಾಸರಗೋಡು ಲೋಕಸಭಾ ಸೀಟಿಗಾಗಿ ಮುಸ್ಲಿಂಲೀಗ್ ಒತ್ತಡ ಮುಂದುವರಿಸಿದೆ. ಇದು ಸಾಧ್ಯವಾದರೆ ಟಿ.ವಿ ರಾಜೇಶ್‌ರ ಬದಲಾಗಿ ವಿ.ಪಿ.ಪಿ. ಮುಸ್ತಫ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಹಾಲಿ ಸಂಸದರಿಗೆ ಇನ್ನೊಂದು ಅವಕಾಶ ಕೂಡಾ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ನಿಲುವು ಹೊಂದಿದೆ. ಇದನ್ನು ಲೀಗ್‌ಗೆ ಅಂಗೀಕರಿಸಬೇಕಾಗಿ ಬಂದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್ ಅವರೇ ಎರಡನೇ ಬಾರಿಗೆ ಯುಡಿಎಫ್‌ನಿಂದ ಕಣಕ್ಕಿಳಿಯಲಿದ್ದಾರೆಂದೂ ಹೇಳಲಾಗುತ್ತಿದೆ.