ಅಯೋಧ್ಯೆಯಲ್ಲಿ ಪೂಜಿಸಿದ ಅಕ್ಷತೆ ಪ್ರಸಾದ ಜಿಲ್ಲೆಗೆ: ಜ. ೧ರಿಂದ ಪ್ರತಿ ಮನೆಗೂ ವಿತರಣೆ
ಹೊಸದುರ್ಗ: ರಾಮಮಂತ್ರ ಧ್ವನಿಯೊಂದಿಗೆ ಅಯೋಧ್ಯೆಯಲ್ಲಿ ಪೂಜಿಸಿದ ಅಕ್ಷತೆ ಪ್ರಸಾದ ಜಿಲ್ಲೆಗೆ ತಲುಪಿತು. ಜ. ೨೨ರಂದು ಅಯೋಧ್ಯೆಯ ಶ್ರೀರಾಮ ಕ್ಷೇತ್ರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆ ಅಂಗವಾಗಿ ಜಿಲ್ಲೆಯ ಎಲ್ಲಾ ಮನೆಗಳಿಗೆ ಈ ಪ್ರಸಾದ ವಿತರಿಸಲಾಗುವುದು. ಇಂದು ಬೆಳಿಗ್ಗೆ ಮಾವುಂಗಲ್ ಶ್ರೀರಾಮ ಕ್ಷೇತ್ರಕ್ಕೆ ತಲುಪಿದ ಪ್ರಸಾದವನ್ನು ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ್ ಬಿ. ಉಣ್ಣಿಕೃಷ್ಣನ್ ಸ್ವೀಕರಿಸಿದರು. ಜ. ೧ರಂದು ಪ್ರಭಾತಬೇರಿ ನಡೆಯಲಿದೆ.
ಮಾವುಂಗಲ್ ಕ್ಷೇತ್ರದಲ್ಲಿರುವ ಅಕ್ಷತೆ ಪ್ರಸಾದವನ್ನು ಜ. ೧ರಿಂದ ೧೫ರ ವರೆಗೆ ಜಿಲ್ಲೆಯ ಎಲ್ಲಾ ಮನೆಗಳಿಗೂ ವಿತರಿಸಲಾಗುವುದು. ಅಯೋಧ್ಯೆಯ ಪ್ರಾಣ ಪ್ರತಿಷ್ಠೆ ದಿನದಂದು ಮನೆಗಳಲ್ಲಿ ದೀಪ ಪ್ರಜ್ವಲನೆ ನಡೆಯಲಿದೆ. ಕ್ಷೇತ್ರಗಳನ್ನು ಕೇಂದ್ರೀಕರಿಸಿ ನಾಮಜಪ ನಡೆಯ ಲಿದೆ. ನಿನ್ನೆ ಎರ್ನಾಕುಳಂ ಪಾಣಕುಳಂ ಕ್ಷೇತ್ರದಲ್ಲಿ ಸ್ವಾಮಿ ಸ್ವರೂಪಾನಂದ ವಿಶ್ವಹಿಂದೂ ಪರಿಷತ್ ರಾಷ್ಟ್ರೀಯ ಸಮಿತಿ ಜೊತೆ ಕಾರ್ಯದರ್ಶಿ ಸ್ಥಾನುಮಾಲಯನ್‌ಜಿ ಎಂಬಿವರಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿಯ ಜಿಲ್ಲಾ ಸಂಯೋಜಕ ಬಾಬು ಪುಲ್ಲೂರು, ಪಿ.ವಿ. ಸುರೇಶ್ ಎಂಬಿವರು ಸ್ವೀಕರಿಸಿದರು.